ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಿಯತಿ ಫೌಂಡೇಶನ್ ಇಲ್ಲಿಯ ಗಜಾನನ ರಾವ್ ಭಾತಖಾಂಡೆ ಶಾಲೆಯ ಬಡ ವಿದ್ಯಾರ್ಥಿನಿಯೋರ್ವಳ ಫೀ ಭರಿಸುವ ಮೂಲಕ ಆಕೆಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ.
ತಂದೆಯನ್ನು ಕಳೆದುಕೊಂಡು, ತಾಯಿ ದುಡಿದ ಹಣದಿಂದ ಜೀವನ ಸಾಗಿಸುತ್ತಿರುವ ಮಾನ್ಯತಾ ಮಣ್ಣೂರಕರ್ ಎನ್ನುವ ಬಾಲಕಿ ಕಷ್ಟದಿಂದ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಪ್ರಜ್ಞಾ ಶಿಂಧೆ ಎನ್ನುವವರು ಬಾಲಕಿಯ ಕಷ್ಟವನ್ನು ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಬಳಿ ಹೇಳಿಕೊಂಡಿದ್ದರು. ತಕ್ಷಣ ಸ್ಪಂದಿಸಿ, ಶನಿವಾರ ಸಖಿ ಗುಜರಾತಿ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ 10 ಸಾವಿರ ರೂ.ಗಳನ್ನು ಬಾಲಕಿಗೆ ಹಸ್ತಾಂತರಿಸಲಾಯಿತು.
ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಕಾರ್ಯದರ್ಶಿ ಮೋನಾಲಿ ಶಹಾ, ದೀಪಾ ಪ್ರಭು ದೇಸಾಯಿ, ಪ್ರಜ್ಞಾ ಕಾಪ್ಸೆ, ಸುಧಾ ಮನಗಾಂವ್ಕರ್, ಸ್ನೇಹಾ ಸರ್ನೋಬತ್, ಸೀಮಾ ಸೊಲ್ಲಾಪುರೆ, ರಾಜಶ್ರೀ ಜಾಧವ, ಡಾ.ಸಮೀರ್ ಸರ್ನೋಬತ್ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ