ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯಾಗುತ್ತಿದೆ. ಅದಕ್ಕೆ ತಕ್ಕಂತೆ ನಾವು ಓಡಲೇಬೇಕು ಎಂದು ಉಪ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಆರಭವಾದ ಅರೇನಾ ಆ್ಯನಿಮೇಶನ್ ಸ್ಕೂಲ್ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಖರೀದಿಸಿದ ಮೊಬೈಲ್ ಕೆಲವೇ ದಿನದಲ್ಲಿ ಔಟ್ ಡೇಟೆಡ್ ಆಗಿರುತ್ತದೆ. ಎಲ್ಲವೂ ವೇಗವಾಗ ಬದಲಾಗುತ್ತಿದೆ. ನಾವು ಉಳಿಯಬೇಕೆಂದರೆ ಬದಲಾವಣೆಗೆ ಸ್ಪಂದಿಸಲೇಬೇಕು ಎಂದ ಅವರು, ಆ್ಯನಿಮೇಶನ್ ಕೋರ್ಸ್ ಇಂದು ಅತ್ಯಂತ ಬೇಡಿಕೆ ಇರುವ ಕೋರ್ಸ ಆಗಿದ್ದು, ಇಂತಹ ಸ್ಕೂಲ್ ಬೆಳಗಾವಿಗೆ ಅಗತ್ಯವಿತ್ತು ಎಂದರು.
ಗ್ರ್ಯಾಮಿ ಮ್ಯೂಸಿಕ್ ಅವಾರ್ಡ್ ವಿನ್ನರ್ ಕೀರ್ತಿ ನಾರಾಯಣ, ಅಂತಾರಾಷ್ಟ್ರೀಯ ಕಲಾವಿದ ರವಿ ಸಾಲಿಮಠ, ಆಪ್ಟೆಕ್ ಉಪಾಧ್ಯಕ್ಷ ಶಾಜನ್ ಸ್ಯಾಮುವೆಲ್, ಅರೇನಾ ಬೆಳಗಾವಿ ಕೇಂದ್ರದ ಮುಖ್ಯಸ್ಥರಾದ ಅಮೃತಾ ಚಿಂಚೋಳಿಮಠ ಮತ್ತು ಸ್ವಾತಿ ಭಟ್ ವೇದಿಕೆಯಲ್ಲಿದ್ದರು. ಲಲಿತಾ ಗಣಾಚಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಭಾಷ್ ಭಟ್, ಶಿರೀಷ್ ಚಿಂಚೋಳಿಮಠ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ