Latest

ಕೆಲಸದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆ; ಮಹಿಳೆ ಸೇರಿ ಮೂವರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ಕರೆದೊಯ್ದು ವೇಶ್ಯಾವಾಟಿಕೆ ದಂಧೆಗೆ ಯುವತಿಯರನ್ನು ನೂಕುತಿದ್ದ ಅಡ್ಡೆ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿದ್ದು, ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ.

25 ವರ್ಷದ ಸೋಮೇಗೌಡ, 32 ವರ್ಷದ ಜಯಕುಮಾರ್ ಹಾಗೂ 25 ವರ್ಷದ ಭವಾನಿ ಬಂಧಿತರು. 24 ವರ್ಷದ ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು.

Home add -Advt

ಬಾಡಿಗೆ ಮನೆಯಲ್ಲಿ ಯುವತಿಯನ್ನಿಟ್ಟು ಫೋನ್ ಕಾಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ದಂಧೆ ನಡೆಸುತ್ತಿದ್ದರು. ಮಹಿಳೆ ಭವಾನಿ ಹಾಗೂ ಸೋಮೇಗೌಡ ಹಾಗೂ ಜಯಕುಮಾರ್ ಬಡ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿ ಕರೆತಂದು ಸೋಮೇಗೌಡನ ಮನೆಯಲ್ಲಿಯೇ ನೆಲಮಹಡಿಯಲ್ಲಿ ಮನೆ ಬಾಡಿಗೆಗೆ ಎಂದು ಹೇಳಿ ಯುವತಿಯರನ್ನಿಟ್ಟು ದಂಧೆ ನಡೆಸುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದನದಲ್ಲಿ ಕ್ಷಮೆ ಕೋರಿದ ರಮೇಶ್ ಕುಮಾರ್ ಹೇಳಿದ್ದೇನು?

Related Articles

Back to top button