ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯುಗಾದಿ ಹಬ್ಬದ ಅಂಗವಾಗಿ ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್‌ಟೌನ್ ವತಿಯಿಂದ ಏ.೬ ರಂದು ಸಂಜೆ ೫ ಕ್ಕೆ ಕೆಎಲ್‌ಇ ಜೀರಗೆ ಸಭಾಭವನದಲ್ಲಿ ಗಂಗಾವತಿ ಪ್ರಾಣೇಶ ಹಾಗೂ ಸಂಗಡಿಗರಿಂದ ’ಯುಗದ ನಗೆ’ ವಿಶೇಷ ಹಾಸ್ಯ ಕಾರ್‍ಯಕ್ರಮ ಆಯೋಜಿಸಲಾಗಿದೆ.
ಖ್ಯಾತ ನಗೆ ಮಾತುಗಾರರಾದ ಬಸವರಾಜ ಮಹಾಮನಿ, ರವಿ ಭಜಂತ್ರಿ ಹಾಗೂ ಇಂದೂಮತಿ ಸಾಲಿಮಠ ಜನರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.
ಯುಗದ ನಗೆ ದೇಣಿಗೆ ಕೂಪನ್‌ಗಳಿಗಾಗಿ ಚೆನ್ನಮ್ಮ ವೃತ್ತದ ಸಾಹಿತ್ಯ ಭವನ (ಮೊ: ೮೦೯೫೨೮೫೫೯೯), ತಿಳಕವಾಡಿ ಆರ್‌ಪಿಡಿ ವೃತ್ತದ ಬಳಿಯ ಉದಯಭವನ, ಹಿಂದವಾಡಿ (೯೪೪೮೦೯೩೫೮೯), ಗುರುಪ್ರಸಾದನಗರ (ಮೊ:೯೯೦೧೧೯೪೦೯೨), ಮಹಾಂತೇಶನಗರ (ಮೊ:೯೪೪೮೧೨೨೦೩೪), ಶಿವಬಸವನಗರ (ಮೊ:೮೩೧೭೩೫೧೩೩೪), ತಿಲಕವಾಡಿ(೯೮೪೫೦೨೬೩೫೭) ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಅಶೋಕ ಬದಾಮಿ, ಇವೆಂಟ್ ಅಧ್ಯಕ್ಷ ಅಶೋಕ ಮಳಗಲಿ ಹಾಗೂ ಕಾರ್‍ಯದರ್ಶಿ ರವಿ ಇಂಚಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ