*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶಾಲಾ ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಬೆಳೆಸುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ಆಯೋಜಿಸುವ ಮೇಘಾ ಡ್ರಾಯಿಂಗ್ ಸ್ಪರ್ಧೆ ಒಂಬತ್ತನೇಯ ವರ್ಷಕ್ಕೆ ಕಾಲಿಟ್ಟಿದೆ.
ಬೆಳಗಾವಿಯ ವ್ಯಾಕ್ಸೀನ್ ಡಿಪೋ ಪರಿಸರದಲ್ಲಿ ನಡೆಯುವ ಈ ಸ್ಪರ್ಧೆಗೆ ಈ ವರ್ಷ 356 ಶಾಲೆಗಳ 14 ,842 ವಿಧ್ಯಾರ್ಥಿಗಳು ಭಾಗವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮೇಘಾ ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಒಂದನೇಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಹಿರಿಯರ ವಿಭಾಗದಲ್ಲಿ ಹೈಸ್ಕೂಲ್ ವಿಭಾಗದ ವಿಧ್ಯಾರ್ಥಿಗಳಿಗೆ ಪ್ರತ್ಯೇಕವಾದ ವಿಷಯಗಳನ್ನು ನೀಡಲಾಗಿತ್ತು. ಕಿರಿಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸುವುದು, ಹಿರಿಯ ವಿದ್ಯಾರ್ಥಿಗಳಿಗೆ ಜಾತ್ರೆ ,ದನದ ಸಂತೆ,ಲೇಜಿಮ್ ಆಡುವ ಭಂಗಿ ಹೀಗೆ ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕ ವಿಷಯಗಳನ್ನು ನೀಡಲಾಗಿತ್ತು.
ಬೆಳಗಾವಿಯ ವ್ಯಾಕ್ಸೀನ್ ಡಿಪೋ ತೆರೆದ ಪರಿಸರದಲ್ಲಿ ಗಿಡಗಳ ನೆರಳಲ್ಲಿ ಕುಳಿತು ಹದಿನಾಲ್ಕು ಸಾವಿರದ ಎಂಟನೂರಾ ನಲವತ್ತೆರಡು ವಿಧ್ಯಾರ್ಥಿಗಳು ತಮ್ಮ ಕಲೆಯನ್ನು ಬಿಳಿ ಹಾಳೆಯ ಮೇಲೆ ಕಲರ್ ಪುಲ್ ಆಗಿ ನಮೂದಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಒಳ್ಳೆಯ ಚಿತ್ರಗಳನ್ನು ಬಿಡಿಸಿದ್ದಾರೆ. ಇದರಲ್ಲಿ ಟಾಪ್ 12 ಚಿತ್ರಗಳನ್ನು ಆಯ್ಕೆ ಮಾಡಿ ಈ ಹನ್ನೆರಡೂ ಚಿತ್ರಗಳನ್ನು ಕ್ಯಾಲೆಂಡರ್ ಗಳಲ್ಲಿ ಮುದ್ರಿಸಿ ಸಾವಿರಾರು ಕ್ಯಾಲೆಂಡರ್ ಗಳನ್ನು ಬೆಳಗಾವಿ ನಗರದಲ್ಲಿ ಹಂಚಿಕೆ ಮಾಡುತ್ತೇವೆ. ಉತ್ತಮ ಚಿತ್ರ ಬಿಡಿಸಿದ ಹನ್ನೆರಡು ಜನ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಸೈಕಲ್ ಕೊಡುತ್ತೇವೆ ಎಂದು ಹೇಳಿದರು.
ನೂರು ಜನ ವಿದ್ಯಾರ್ಥಿಗಳಿಗೆ ಉತ್ತೇಜನ ಬಹುಮಾನ ಮತ್ತು ಸಮಾಧಾನಕರ ಬಹುಮಾನಗಳನ್ನು ಕೊಡುತ್ತೇವೆ ಜನೇವರಿ ತಿಂಗಳಲ್ಲಿ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿರು ಮಾಲಿನಿ ಸಿಟಿಯಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಬಹುಮಾನ ವಿತರಿಸುವ ಜೊತೆಗೆ ಟಾಪ್ 12 ವಿದ್ಯಾರ್ಥಿಗಳ ಪಾಲಕರನ್ನು ಇದೇ ಸಂಧರ್ಭದಲ್ಲಿ ಸತ್ಕಾರ ಮಾಡುತ್ತೇವೆ ಎಂದು ಅಭಯ ಪಾಟೀಲ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ