Film & EntertainmentKannada NewsKarnataka NewsLatest

*BMTC ಡಿಪೋಗೆ ನಟ ರಜನಿಕಾಂತ್ ದಿಢೀರ್ ಭೇಟಿ; ಸೂಪರ್ ಸ್ಟಾರ್ ಕಂಡು ಅಚ್ಚರಿಗೊಂಡ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಬಿಎಂಟಿಸಿ ಡಿಪೋಗೆ ದಿಢೀರ್ ಭೇಟಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನ ಜಯನಗರ ಡಿಪೋ 4ಕ್ಕೆ ಭೇಟಿ ನೀಡಿದ ನತ ರಜನಿಕಾಂತ್, ಅಲ್ಲಿದ್ದ ಅಧಿಕಾರಿಗಳು, ಮೆಕಾನಿಕ್, ಡ್ರೈವರ್, ಕಂಡಕ್ಟರ್ ಸೇರಿದಂತೆ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿದರು. ಡಿಪೋದಲ್ಲಿ ರಜನಿಕಾಂತ್ ಅವರನ್ನು ಕಂಡ ಸಿಬ್ಬಂದಿಗಳು ಅಚ್ಚರಿ ಚಕಿತರಾದರು. ಸೂಪರ್ ಸ್ಟಾರ್ ಜೊತೆ ಸೆಲ್ಫೀ ಕ್ಲಿಕ್ಕಿಸಿ ಸಂಭ್ರಮಿಸಿದರು.

Home add -Advt

ಇದೇ ವೇಳೆ ನಟ ರಜನಿಕಾಂತ್ ತಾವು ಬಿಎಂಟಿಸಿ ಬಸ್ ನಲ್ಲಿ ಕಂಡಕ್ಟರ್ ಆಗಿದ್ದ ದಿನಗಳನ್ನು ನೆನಪಿಸಿಕೊಂಡರು. ಈ ವೇಳೆ ರಜನಿಕಾಂತ್ ಅವರಿಗೆ ಸ್ನೇಹಿತ ರಾಜ್ ಬಹದ್ದೂರ್ ಸಾಥ್ ನೀಡಿದ್ದರು. ಹತ್ತು ನಿಮಿಷಗಳ ಕಾಲ ಡಿಪೋದಲ್ಲಿ ಕಾಲ ಕಳೆದ ರಜನಿಕಾಂತ್ ಬಳಿಕ ಗಾಂಧಿ ಬಜಾರ್ ನಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.


Related Articles

Back to top button