Belagavi NewsBelgaum NewsKannada NewsKarnataka News

*ಪಟ್ಟಣ ಪಂಚಾಯಿತಿ ಕ್ರಮಕ್ಕೆ ದಯಾಮರಣ ಅರ್ಜಿ ಸಲ್ಲಿಸಿದ ದಂಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೌಟುಂಬಿಕ ಜಗಳದಲ್ಲಿ ಪಟ್ಟಣ ಪಂಚಾಯಿತಿ ಮಧ್ಯಪ್ರವೇಶಿಸಿ ನಲ್ಲಿ ನೀರು ಸ್ಥಗಿತಗೊಳಿಸಿರುವ ಕ್ರಮದಿಂದ ನೊಂದಿರುವ ದಂಪತಿ ನಮಗೆ ದಯಾಮರಣ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ನಡೆಸಿದೆ.

ಕಿತ್ತೂರು ತಹಶೀಲ್ದಾ‌ರ್ ಕಲಗೌಡ ಪಾಟೀಲ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ಮಂಜುನಾಥ ಸವದಿ ಹಾಗೂ ಅವರ ಪತ್ನಿ ಶ್ರುತಿ ಸವದಿ ದಯಾಮರಣ ಕೋರಿ ಮನವಿ ಸಲ್ಲಿಸಿದವರು.

Home add -Advt

ಕುಡಿಯುವ ನೀರು ಪೂರೈಕೆಯ ನಲ್ಲಿಯನ್ನೇ ಪಟ್ಟಣ ಪಂಚಾಯಿತಿ ಸಿಬ್ಬಂದಿ ನಿಲ್ಲಿಸಿದ್ದರಿಂದ ನಮ್ಮ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ನಲ್ಲಿಯ ಬಿಲ್ ಬಾಕಿ ಇಲ್ಲದಂತೆ ಪಾವತಿ ಮಾಡಿದ್ದೇವೆ. ಕುಟುಂಬದ ಜಗಳದಲ್ಲಿ ಮಧ್ಯಪ್ರವೇಶಿಸಿ ಮೂಲಸೌಲಭ್ಯ ಸ್ಥಗಿತಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಶ್ರುತಿ ಪ್ರಶ್ನಿಸಿದರು.

ಎಲ್ಲರ ಕಿರುಕುಳದಿಂದ ನಮ್ಮ ಕುಟುಂಬಕ್ಕೂ ಬೇಸರವಾಗಿದೆ. ಬದುಕುವ ಆಸೆ ಕಮರಿಹೋಗಿದೆ. ಕಾರಣ ನಮಗೆ ದಯಾಮರಣ ಕರುಣಿಸಬೇಕು ಎಂದು ಈ ದಂಪತಿ ಮನ ಮಿಡಿಯುವ ಹಾಗೆ ಅರ್ಜಿಯಲ್ಲಿ ಬರೆದುಕೊಂಡಿದ್ದಾರೆ.

Related Articles

Back to top button