ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ರಾಣಿ ಚೆನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್‌ಗೆ ಕರ್ನಾಟಕ ರಾಜ್ಯದಲ್ಲೇ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ.
65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ನವೆಂಬರ 17ರಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಒಕ್ಕೂಟವು ಕೊಡಮಾಡುವ ಅತ್ಯುತ್ತಮ ಮಹಿಳಾ ಸಹಕಾರಿ ಬ್ಯಾಂಕ್ ಎಂಬ ಪ್ರಶಸ್ತಿ ರಾಣಿ ಚನ್ನಮ್ಮ ಬ್ಯಾಂಕ್ ಗೆ ಬಂದಿದೆ.
1997ರಲ್ಲಿ ಸ್ಥಾಪನೆಗೊಂಡಿರುವ ಬೆಳಗಾವಿಯ ರಾಣಿ ಚೆನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್, ಅಧ್ಯಕ್ಷರಾಗಿರುವ ಆಶಾ ಪ್ರಭಾಕರ ಕೋರೆ ಅವರ ಮುಂದಾಳತ್ವ ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಮಹಿಳಾ ಬ್ಯಾಂಕ್ ಆರ್ಥಿಕವಾಗಿ ಸ್ಥಿರವಾಗಿ ಬೆಳೆದಿದೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಏಳು ಶಾಖೆ ಹಾಗೂ ಒಂದು ವಿಸ್ತರಣಾ ಶಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಭಾರತೀಯ ರಿಸರ್ವ ಬ್ಯಾಂಕಿನ ಆಡಿಟ್‌ನಲ್ಲಿ ನಿರಂತರವಾಗಿ ಎ ಗ್ರೇಡ್ ಪಡೆಯುತ್ತ ಬಂದಿದೆ.
ಈ ಸಾಧನೆಗಾಗಿ ಅಧ್ಯಕ್ಷೆ ಆಶಾ ಕೋರೆ ಹಾಗೂ ಆಡಳಿತ ಮಂಡಳಿ ಸಿಬ್ಬಂದಿವರ್ಗದವರನ್ನು ಅಭಿನಂದಿಸಿದೆ.



