ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠಕ್ಕೆ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಸೋಮವಾರ ಉತ್ತರ ಸಿಗಲಿದೆ.
ಸೋಮವಾರ 11 ಗಂಟೆಗೆ ಉತ್ತರಾಧಿಕಾರಿ ಹೆಸರು ಪ್ರಕಟಿಸಲು ಪತ್ರಿಕಾಗೋಷ್ಠಿ ಕರೆಯಲಾಗಿದೆ. ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮಿಗಳು ಸಧ್ಯ ಗದಗದ ತೊಂಟದಾರ್ಯ ಮಠದ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಅವರು ತೊಂಟದಾರ್ಯ ಮಠದ ಜವಾಬ್ದಾರಿ ಹೊರುವ ಮುನ್ನವೇ ಬೆಳಗಾವಿ ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿ ನೇಮಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಾಧಿಕಾರಿ ಹುಡುಕುವುದಕ್ಕಾಗಿ ಸಮಿತಿಯೊಂದನ್ನು ಸಹ ನಿಯೋಜಿಸಲಾಗಿತ್ತು.
ಇದೀಗ ಉತ್ತರಾಧಿಕಾರಿ ಆಯ್ಕೆಯಾಗಿದ್ದು, ಸೋಮವಾರ ಅಧಿಕೃತ ಘೋಷಣೆಯಾಗಲಿದೆ. ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿದ್ದರಾಮ ಸ್ವಾಮಿಗಳು ರುದ್ರಾಕ್ಷಿಮಠಕ್ಕೆ ಮಾರ್ಗದರ್ಶರಾಗಿಯಷ್ಟೆ ಉಳಿಯಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ