ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬೆಳಗಾವಿಯ ಏರಮನ್ ತರಬೇತಿ ಶಾಲೆಗೆ ಭೇಟಿ ನೀಡಿದ್ದರು. ಈ ಪ್ರತಿಷ್ಠಿತ ಶಾಲೆಗೆ ಭೇಟಿ ನೀಡಿದ ಮೊದಲ ರಕ್ಷಣಾ ಮಂತ್ರಿ ಎನಿಸಿಕೊಂಡಿದ್ದಾರೆ.
ಏರ್ ಮಾರ್ಶಲ್ ರಾಕೇಶ್ ಸಿಂಗ್ ಹಾಗೂ ಏರ್ ಕಮಾಂಡರ್ ಆರ್.ರವಿಶಂಕರ ನಿರ್ಮಲಾ ಸೀತಾರಾಮ್ ಅವರನ್ನು ಸ್ವಾಗತಿಸಿ, ಶಾಲೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.
ಸಂಪೂರ್ಣ ತರಬೇತಿ ಪ್ರದೇಶವನ್ನು ಸುತ್ತು ಹಾಕಿದ ನಿರ್ಮಲಾ ಸೀತಾರಾಮನ್, ತರಬೇತಿದಾರರೊಂದಿಗೆ ಚರ್ಚಿಸಿದರು. ಅಲ್ಲಿನ ವಿವಿಧ ವಿಭಾಗಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ವೃತ್ತಿಪರ ರೀತಿಯಲ್ಲಿ ಹೇಗೆ ತರಬೇತಿ ಶಾಲೆಯನ್ನು ಅನ್ನಷ್ಟು ಅಭಿವೃದ್ಧಿಪಡಿಸಬೇಕೆಂದು ಸಲಹೆ ನೀಡಿದರು. ಪ್ರತಿ ವರ್ಷ 8000 ಜನರಿಗೆ ಈ ಶಾಲೆಯಲ್ಲಿ ತರಬೇತಿ ನೀಡುತ್ತಿರುವುದನ್ನು ಶ್ಲಾಘಿಸಿದ ಸಚಿವೆ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಅವರ ಪಾತ್ರವನ್ನು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ