ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ರಾಣಿ ಚನ್ನಮ್ಮ ನಗರದಲ್ಲಿ 13ನೇ ಜನರಿಕ್ ಔಷಧ ಮಳಿಗೆ ಶುಕ್ರವಾರ ಸಂಜೆ ಉದ್ಘಾಟನೆಯಾಯಿತು.
ಮಹೇಶ ಜಾಧವ ಅವರ ಏಜನ್ಸಿಯಡಿ ವಿನಾಯಕ ಹೆಗಡೆ ಈ ಮಳಿಗೆಯ ಫ್ರ್ಯಾಂಚೈಸಿ ತೆಗೆದುಕೊಂಡಿದ್ದು, ಹಲವಾರು ಗಣ್ಯರು, ಹಿರಿಯ ನಾಗರಿಕರು ಆಗಮಿಸಿ ಮಳಿಗೆಗೆ ಶುಭ ಹಾರೈಸಿದರು. ಅತ್ಯಂತ ಕಡಿಮೆ ದರದಲ್ಲಿ ಔಷಧ ಪೂರೈಸುವ ಜನರಿಕ್ ಔಷಧ ಮಳಿಗೆಯಿಂದ ಈ ಭಾಗದ ಜನರಿಗೆ ಲಾಭವಾಗಲಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕೆಂದು ಗಣ್ಯರು ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ