Latest

ಬೈಲಹೊಂಗಲದಲ್ಲಿ ಕಾಂಗ್ರೆಸ್ ರೋಡ್ ಶೋ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ:

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್.ಸಾಧುನವರ ಪರ ಶಾಸಕ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮಂಗಳವಾರ ರೋಡ್ ಶೋ ನಡೆಸಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿ ಸ್ಥಳದಲ್ಲಿ ಸೇರಿದ ಕಾರ್ಯಕರ್ತರು, ಅಭಿಮಾನಿಗಳು ಸಾಧುನವರ ಪರ ಜಯಘೋಷ ಮೊಳಗಿಸಿದರು. ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ರೋಡ್ ಶೋ ಆರಂಭಿಸಿದರು.

Home add -Advt

ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತದ ಮೂಲಕ ಹಾಯ್ದು ಅಂಬೇಡ್ಕರ ಉದ್ಯಾನವನಕ್ಕೆ ರೋಡ ಶೋ ತೆರಳಿತು. ರಸ್ತೆಯುದ್ದಕ್ಕೂ ಕಾಂಗ್ರೆಸ್, ಜೆಡಿಎಸ್ ಪಕ್ಷದ ಬಾವುಟಗಳು ರಾರಾಜಿಸಿದವು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಬೇಕು. ನೂರಾರು ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿ ಬಡವರಿಗೆ ಆಶ್ರಯದಾತರಾಗಿರುವ ಡಾ.ವಿ.ಎಸ್. ಸಾಧುನವರ ಅವರಿಗೆ ಅಮೂಲ್ಯ ಮತ ನೀಡಿ ಚುನಾಯಿತರನ್ನಾಗಿಸಬೇಕು ಎಂದು ಮನವಿ ಮಾಡಿದರು. 

ಮುಖಂಡರಾದ ಡಾ.ಚಂದ್ರಶೇಖರ ಸಾಧುನವರ, ಅಭ್ಯರ್ಥಿಯ ಪುತ್ರಿಯರಾದ ತೃಪ್ತಿ ಸಾಧುನವರ, ಕೃಪಾ ಸಾಧುನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ, ಮುರಗೋಡ ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಜಿಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಾಜಶೇಖರ ಮೂಗಿ, ಪತ್ರೆಪ್ಪ ವಾಲಿ, ಬಸವರಾಜ ಜನ್ಮಟ್ಟಿ, ಗುರುಪುತ್ರಪ್ಪ ಹೊಸಮನಿ, ಶಂಕರೆಪ್ಪಣ್ಣಾ ತುರಮರಿ, ಮಲ್ಲನಾಯ್ಕ ಪಾಟೀಲ, ಪಾರಿಶ ಭಾವಿ, ಮಹಾಂತೇಶ ಮೊರಬದ, ಉದಯ ಖನ್ನಿನಾಯ್ಕರ, ಶ್ರೀಶೈಲ ಅಬ್ಭಾಯಿ, ಉಮೇಶ ಬೋಳೆತ್ತಿನ, ಬಸವಪ್ರಭು ಬೆಳಗಾವಿ, ಮಲ್ಲನಾಯ್ಕ ಪಾಟೀಲ, ರಾಜಶೇಖರ ಎತ್ತಿನಮನಿ, ರವಿ ಮೂಗಬಸವ, ವಿರುಪಾಕ್ಷ ವಾಲಿ, ಮಲ್ಲಪ್ಪ ಮುರಗೋಡ, ಶಿವರುದ್ರಪ್ಪ ಹಟ್ಟಿಹೊಳ್ಳಿ, ಪುರಸಭೆ ಎಲ್ಲ ಸದಸ್ಯರುಗಳು, ಯುವ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಎಲ್ಲ ಪದಾಧಿಕಾರಿಗಳು, ಮುಸ್ಲಿಂ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದ್ದರು. 

 

 

 

Related Articles

Back to top button