ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವಿಷಯದ ಕುರಿತು ಮೇ 24ರಂದು ಒಂದು ದಿನದ ಕಾರ್ಯಾಗಾರ ನಡೆಯಲಿದೆ.
ಈ ಕಾರ್ಯಾಗಾರವು ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಆಲೋಚನೆಗಳನ್ನು ಮತ್ತು ವ್ಯಾಪಾರ ತಂತ್ರಗಳನ್ನು ರಕ್ಷಿಸಲು ಅಳತೆ ತೆಗೆದುಕೊಳ್ಳಲು ಸಹಾಯಕವಾಗಲಿದೆ.
ತಾಂತ್ರಿಕ ನಾವೀನ್ಯತೆಯನ್ನು ಹೇಗೆ ರಕ್ಷಿಸುವುದು, ಪೇಟೆಂಟ್ ಮಾಹಿತಿ, ಐಪಿ ಲಾ, ಆರ್ & ಡಿ ಮತ್ತು ಜ್ಞಾನವರ್ಗಾವಣೆ ಬಳಸಿ, ಪುಣೆಯ ಐಪಿಆರ್ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದ ಪ್ರೊಫೆಸರ್ ಗಣೇಶ ಎಸ್. ಹಿಂಗ್ಮಿರೆ, ಅಧ್ಯಕ್ಷರು ಮತ್ತು ಪೌಂಡರ್ ಜಿಎಂಜಿಸಿಯ ಅನಂತ್ ತಕ್ವಾಲೆ, ಐಪಿಎಸ್, ಆರ್.ಪಿ.ಓ ರಾಮ್ ದಿಂಬಾಲೆ, ಪ್ರಭೋದ ಉದ್ಯೋಗದ ನಿರ್ದೇಶಕಿ ರಶ್ಮಿ ಹಿಂಗ್ಮಿರೆ, ಪೇಟೆಂಟ್ ಎಕ್ಸ್ಪರ್ಟ, ಜಿಎಂಜಿಸಿ ಭಾಗವಹಿಸಿ ಕಾರ್ಯಾಗಾರವನ್ನು ನಡೆಸಿ ಕೊಡಲಿದ್ದಾರೆ.
ರಿಸರ್ಚ ಸ್ಕಾಲರ್ಸಗಳಾದ ತಾಂತ್ರಿಕ, ವೈದ್ಯಕೀಯ, ಕೃಷಿ, ತೋಟಗಾರಿಕಾ, ಫಾರ್ಮಸಿ, ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಮುಂತಾದ ಕೋರ್ಸನವರು ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಿದ್ಧರಾಮಪ್ಪ ಇಟ್ಟಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ