ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭರತೇಶ ಶಿಕ್ಷಣ ಸಂಸ್ಥೆ ಮತ್ತು ಡಾ. ಆ.ನೇ. ಉಪಾಧ್ಯೆ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಡಾ.ಆ.ನೇ. ಉಪಾಧ್ಯೆ ಅವರ ಜನ್ಮದಿನದ ಅಂಗವಾಗಿ ಬಸವಂತಪ್ಪ ಭರಮಪ್ಪ ಪಾಟೀಲ ದಂಪತಿಗಳ ಸ್ಮರಣಾರ್ಥ ನಗರದ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಬಾಳಣ್ಣ ಶೀಗಿಹಳ್ಳಿ ಜನ್ನಕವಿಯ ‘ಯಶೋಧರ ಚರಿತೆ: ಧರ್ಮ ಮತ್ತು ಕಾವ್ಯಧರ್ಮ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಜಿನದತ್ತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಖಜಾಂಚಿ ಶ್ರೀಪಾಲ ಖೇಮಲಾಪುರೆ, ಡಾ. ಎ.ಆರ್.ರೊಟ್ಟಿ ಉಪಸ್ಥಿತರಿದ್ದರು. ಡಾ.ಆ.ನೇ. ಉಪಾಧ್ಯೆ ವಿಸ್ತರಣ ಕೇಂದ್ರದ ಮುಖ್ಯಸ್ಥ ಡಾ. ಎಸ್.ಎಸ್. ಅಂಗಡಿ ಸ್ವಾಗತಿಸಿದರು. ಡಾ. ಭರತ ಅಲಸಂದಿ ನಿರೂಪಿಸಿದರು. ಜ್ಯೋತಿ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ