ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:
ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಮದ್ಯದ ವ್ಯಸನಿಗಳಿಂದ ಹಾಳಾಗಿವೆ. ಶಿಬಿರಗಳ ಮುಖಾಂತರ ಅವರನ್ನು ವ್ಯಸನ ಮುಕ್ತರನ್ನಾಗಿ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಉದ್ದೇಶವೆಂದು ತಾಲೂಕಿನ ಯೋಜನಾಧಿಕಾರಿ ಪ್ರಶಾಂತ ನಾಯಕ ಹೇಳಿದರು.
ಸ್ಥಳೀಯ ಕಲ್ಮಠದ ಸಭಾ ಭವನದಲ್ಲಿ ಶುಕ್ರವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ, ನವ ಜೀವನ ಪೋಷಕರ ತರಬೇತಿ ಕಾರ್ಯಕ್ರಮದಲ್ಲಿ
ಮಾತನಾಡಿ, ನಾವು ಈಗಾಗಲೇ ತಾಲೂಕಿನಲ್ಲಿ ಮೂರು ಸ್ಥಳಗಳಲ್ಲಿ ಮದ್ಯವರ್ಜನ ಶಿಬಿರಗಳನ್ನು
ಏರ್ಪಡಿಸಿದ್ದೇವೆ. ಇಲ್ಲಿ ನೂರಾರು ಜನ ಮದ್ಯ ವ್ಯಸನಿಗಳು ಪಾಲ್ಗೊಂಡಿದ್ದರು. ಅವರಲ್ಲಿ
ಬಹುಪಾಲು ಜನರು ಮದ್ಯ ಸೇವನೆಯಿಂದ ದೂರ ಉಳಿದ್ದಾರೆ. ಇದರಿಂದ ಅವರ ಕುಟುಂಬದ ಆದಾಯ, ನೆಮ್ಮದಿ, ಸುಖ ಶಾಂತಿ ಲಭಿಸಿದೆ ಎಂದು ಹೇಳಿದರು.
ಇಂತವರಿಗೆ ಅವರ ಉದ್ಯೋಗಕ್ಕೆ ಅನುಸಾರವಾಗಿ ಅವರಿಗೆ ಹಣಕಾಸಿನ ನೆರವನ್ನು ನೀಡಿ
ಉದ್ಯೋಗವಂತರನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಆದ್ದರಿಂದ ನವಜೀವನ ಪೋಷಕರ ತರಬೇತಿ ಪಡೆದವರು ಗ್ರಾಮಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಪಾನಮುಕ್ತರನ್ನಾಗಿ ಮಾಡಿ
ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.
ಶಿಬಿರಗಳ ಮೇಲ್ವಿಚಾರಕ ನಾಗರಾಜ ಮಾತನಾಡಿ ರಾಮ ರಾಜ್ಯದ ಕನಸ್ಸನ್ನು ನನಸು ಮಾಡುವ
ನಮ್ಮ ಶ್ರೀ ಗಳ ಯೋಜನೆ ದುಶ್ಚಟ ಮುಕ್ತ ರಾಜ್ಯವನ್ನು ಮಾಡುವುದಾಗಿದೆ.ಆದ್ದರಿಂದ ದುಶ್ಚಟದಿಂದ ದೂರ ಉಳಿದರೆ ರಾಮ ರಾಜ್ಯ ನಿರ್ಮಾಣವಾಗುತ್ತದೆ ಎಂದರು.
ಪೋಷಕರು ನವಜೀವನ ಸಮೀತಿಯ ಸಭೆಯನ್ನು ತಿಂಗಳಲ್ಲಿ ಎರಡು ಬಾರಿಯಾದರೂ ಏರ್ಪಡಿಸಿ ಅವರಿಗೆ ತಿಳುವಳಿಕೆಯನ್ನು ನೀಡಬೇಕು. ಸಭೆಗಳನ್ನು ಮಾಡಿದರೆ ನಮ್ಮ ಸಂಘದಿಂದ ಗೌರವ ಧನ
ಸಿಗುತ್ತದೆ. ಇಂತಹ ದೊಡ್ಡ ಸಾಧನೆ ಮಾಡಿ ಸಮಾಜದಲ್ಲಿ ಜನರು ನೆಮ್ಮದಿಯಿಂದ ಬದುಕುವಂತೆ
ಮಾಡಬೇಕೆಂದರು. ಕಿತ್ತೂರ ತಾಲೂಕಿನ ನವ ಜೀವನ ಸಮೀತಿಯವರು ತಾಲೂಕನ್ನು ರಾಮ
ರಾಜ್ಯವನ್ನಾಗಿ ಮಾಡಬೇಕೆಂದರು. ಹಾಗೂ ಮಕ್ಕಳ ಬಗ್ಗೆ ಹೆಚ್ಚನ ಕಾಳಜಿ ವಹಿಸಬೇಕು. ಅವರಿಗೆ ಒತ್ತಡ
ಹೇರಬಾರದು ಅವರಲ್ಲಿ ದೇಶ ಪ್ರೇಮ ಬೆಳೆಸುವ ಪುಸ್ತಕಗಳನ್ನು ಓದಲು ಕೊಡಬೇಕು.
ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಒಳ್ಳೆಯ ಸಮಾಜ ನಿರ್ಮನ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಪೋಷಕರ ಸಮೀತಿಯನ್ನು ರಚಿಸಿಲಾಯಿತು ಹಾಗೂ ಇದಕ್ಕೂ ಪೂರ್ವದಲ್ಲಿ
ನವಜೀವನ ಪೋಷಕರಿಗೆ ತರಬೇತಿಯನ್ನು ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಪಯೋಜನೆಯ 2018- 19 ನೇ ಸಾಲಿನ ಸುಜ್ಞಾನ ನಿಧಿ ಶಿಷ್ಯ ವೇತನ
ಯೋಜನೆಯಡಿಯಲ್ಲಿ ತಾಲೂಕಿನ ಐದು ಜನ ಉನ್ನತ ದರ್ಜೆಯಲ್ಲಿ ಪಾಸಾದ ವಿಧ್ಯಾರ್ಥಿಗಳಿಗೆ ವೃತ್ತಿ ಕೋರ್ಸ್ ವ್ಯಾಸಂಗಕ್ಕಾಗಿ ಶಿಷ್ಯ ವೇತನ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರು, ತಾಲೂಕಿನ ನವ ಜೀವನ ಪೋಷಕ ಸದಸ್ಯರು
ಉಪಸ್ಥಿತರಿದ್ದರು. ವಿಜಯಾ ಸ್ವಾಗತಿಸಿದರು. ಕೃಷ್ಣಪ್ಪ ವಂದಿಸಿದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ