
ಪ್ರಗತಿವಾಹಿನಿ ಸುದ್ದಿ, ಖಾನಾಪುರ
ರೈತಸೇನಾ ಕರ್ನಾಟಕದ ನೇತೃತ್ವದಲ್ಲಿ ಇಂದು ಕಳಸಾ ಮತ್ತು ಹಳತಾರ ಆಣೆಕಟ್ಟು ನಿರ್ಮಿಸುವ ಸಲುವಾಗಿ ಉಡಿ ತುಂಬುವ ಕಾರ್ಯಕ್ರಮ ಮತ್ತು ರೈತರಿಂದ ಗುದ್ದಲಿ ಪೂಜೆ ಕಾರ್ಯಕ್ರಮ ಕಣಕುಂಬಿಯ ಹತ್ತಿರ ನೆರವೇರಿತು.
ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈ ಯೋಜನೆಯ ಜಾರಿಗಾಗಿ ರೈತರೇ ಹಣ ಸಂಗ್ರಹಿಸಿ ಕೊಡುವುದು ಹಾಗೂ ಬರಲಿರುವ ದಿನಗಳಲ್ಲಿ ಇನ್ನೂ ವಿಭಿನ್ನ ರೀತಿಯ ಹೋರಾಟ ಮಾಡುವ ನಿರ್ಣಯ ಕೈಗೊಳ್ಳಲಾಯಿತು.