ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಮಹಿಳೆಯರು ಹೊಲಿಗೆಯಂತ ಉದ್ಯೋಗಗಳಲ್ಲಿ ತೊಡಗಿ ಕುಟುಂಬವನ್ನು ಆರ್ಥಿಕವಾಗಿ ಸದೃಢರಾಗಿಸಬೇಕು’ ಎಂದು ಮುನ್ಯಾಳ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಚಿಪ್ಪಲಕಟ್ಟಿ ಹೇಳಿದರು.
ತಾಲ್ಲೂಕಿನ ರಂಗಾಪುರದಲ್ಲಿ ಚನ್ನದಾಸರ ಸಮಾಜದಿಂದ ರಾಜರಾಜೇಶ್ವರಿ ಗ್ರಾಮೀಣ ಮಹಿಳಾ ಉದ್ಯೋಗ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷೆ ಪೂಜಾ ಮಾರುತಿ ಗೌಡರ ಮಾತನಾಡಿ ಗ್ರಾಮೀಣ ಮಹಿಳೆಯರಿಗೆ ಬಟ್ಟೆಗಳ ಹೊಲಿಗೆಯ ತರಬೇತಿ ನೀಡಿ ಅವರಿಗೆ ಉದ್ಯೋಗ ದೊರೆಯುವಂತೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಅತಿಥಿಯಾಗಿ ರವಿಗೌಡ ಪಾಟೀಲ, ಕಲ್ಲಪ್ಪ ಮನಗೂಳಿ, ರತ್ನವ್ವ ಮಿಚ್ಚೆನ್ನವರ, ಮಾದೇವ ಹಿರೇಮಠ, ಯಲ್ಲವ್ವ ಮೆಚ್ಚೆನ್ನವರ, ಲಕ್ಷ್ಮೀಬಾಯ ಅ. ಗೌಡರ, ಶಾರದಾ ಗೌಡರ, ಪಾರ್ವತಿ ಗೌಡರ, ಸ್ವಾಮಿ ವಿವೇಕಾನಂದ ಸಂಘದ ಕಾರ್ಯದರ್ಶಿ ಕೃಷ್ಣಾ ಜಿನಗನ್ನವರ, ಸುಭಾಷ ಹಳ್ಳೂರ ಇದ್ದರು.
ಉದ್ಘಾಟನೆಯ ನಂತರ ದಿ. ಭೀಮವ್ವ ಲ. ಜಾರಕಿಹೊಳಿ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ