ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗೆ ಇದ್ದೇ ಇದೆ, ಆತ್ಮವಿಶ್ವಾಸವೂ ಇದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಜದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ, ಈ ಭಾಗದ ಜನರ ಮನಸ್ಸಿನಲ್ಲಿಯೂ ಇದೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಪಕ್ಷ, ಹೈಕಮಾಂಡ್, ಶಾಸಕರು , ಮುಖಂಡರು ಈ ಬಗ್ಗೆ ನಿರ್ಧರಿಸುತ್ತಾರೆ, ನೋಡೋಣ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಆರಂಭವಾಗಿರುವ “ನನ್ನ ಸಿಎಂ ಸತೀಶ ಜಾರಕಿಹೊಳಿ ” ಅಭಿಯಾನದ ಕುರಿತಂತೆ ತಮ್ಮ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಒಂದು ಹಂತಕ್ಕೆ ಬಂದ ಮೇಲೆ ಮುಂದೆ ಹೋಗಬೇಕು ಎನ್ನುವ ಆಶಯ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಅಭಿಮಾನಿಗಳು ಈ ಕುರಿತಂತೆ ಅಭಿಯಾನ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುತ್ತದೆಯೋ ನೋಡೋಣ ಎಂದರು.
ಕೇವಲ ಒಂದು ಸಮುದಾಯದವರು ಬಯಸಿದರೆ ಮುಖ್ಯಮಂತ್ರಿ ಆಗೋಕೆ ಆಗೊಲ್ಲ. ಬದಲಾಗಿ ಹೈಕಮಾಂಡ್, ಶಾಸಕರು , ಪಕ್ದದ ಮುಖಂಡರು ಈ ಬಗ್ಗೆ ತೀರ್ಮಾನಿಸಬೇಕು. ಹತ್ತು ವರ್ಷಗಳಲ್ಲಿ ಸಾಕಷ್ಟು ಹುದ್ದೆಗಳನ್ನು ನಿಭಾಯಿಸಿರುವುದರಿಂದ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥ್ಯ ನನಗೆ ಇದ್ದೇ ಇದೆ, ಆತ್ಮವಿಶ್ವಾಸವೂ ಇದೆ ಎಂದು ಅವರು ಹೇಳಿದರು.
ಒಮ್ಮೆಲೆ ಯಾವುದೂ ಆಗುವುದಿಲ್ಲ. ಚುನಾವಣೆ ಆಗಬೇಕು, ಇನ್ನೂ ಕಾಲಾವಕಾಶವಿದೆ ಎಂದು ಅವರು ಹೇಳಿದರು.
ರಾಜ್ಯ ಬಜೆಟ್ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿಯೇ ದೋಸ್ತಿ ಸರಕಾರಕ್ಕೆ ಬಿಜೆಪಿ ಠಕ್ಕರ್ ಕೊಡುತ್ತದೆಯೇ ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಬಾಲಚಂದ್ರ ನೇತೃತ್ವ ಎಂದು ಹೇಳುವುದು ತಪ್ಪಾಗುತ್ತದೆ. ಅವರು ಬಿಜೆಪಿಯಲ್ಲಿದ್ದಾರೆ. ಪಕ್ಷ ಹೇಳಿದಂತೆ ಅವರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ ಬಿಡಿ ಎಂದರು. ಕಳೆದ ಹಲವು ತಿಂಗಳಿಂದಲೂ ಬಿಜೆಪಿಯವರು ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ