


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರೋಟರಿ ಜಿಲ್ಲೆ 3170ರ ಇ ಕ್ಲಬ್ ಬೆಳಗಾವಿಯ ಮೂವರು ನಾಗರಿಕರನ್ನು ವೃತ್ತಿಯಲ್ಲಿನ ಅವರ ಅನುಪಮ ಸೇವೆಗಾಗಿ ರೋಟರಿ ವೊಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಗೆ ಆಯ್ಕೆ ಮಾಡಿದೆ.
ಹೊಟೆಲ್ ಉದ್ಯಮಿ ವಿಠ್ಠಲ ಹೆಗಡೆ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಮತ್ತು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ ಮೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.

ರೋಟರಿ ಕ್ಲಬ್ ವಿಶ್ವಾದ್ಯಂತ ಬೇರೆ ಬೇರೆ ವೃತ್ತಿಗಳಲ್ಲಿ ಅಮೋಘ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುತ್ತ ಬಂದಿದೆ. ಫೆ.21ರಂದು ಸಂಜೆ 4.30ಕ್ಕೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮ್ಯಾಸಾನಿಕ್ ಹಾಲ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರೋಟರಿ ಇ ಕ್ಲಬ್ ಅಧ್ಯಕ್ಷೆ ರೇಣು ಕುಲಕರ್ಣಿ ತಿಳಿಸಿದ್ದಾರೆ.