Latest

ಮೃತ ಮೆದಳು- ಅಂಗಾಂಗ ದಾನ: ವೈದ್ಯಕೀಯ ಶಿಕ್ಷಣ ಕಾರ‍್ಯಾಗಾರ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜೀವಸಾರ್ಥಕತೆ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಚೆನ್ನೈನ ಮೋಹನ ಪ್ರತಿಷ್ಠಾನವು ಮೃತ ಮೆದಳು ಹಾಗೂ ಅಂಗಾಂಗ ದಾನ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ‍್ಯಾಗಾರವನ್ನು ಇದೇ ದಿ. 7 ಡಿಸೆಂಬರ 2018ರಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ಕಾರ‍್ಯಾಗಾರವನ್ನು ಎಮ್‌ಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಗೋವಿಂದ ಕಲ್ವಾಡ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೊಲೀಸ್ ಕಮಿಷನರ್ ಡಿ ಸಿ ರಾಜಪ್ಪ, ಗೌರವ ಅತಿಥಿಗಳಾಗಿ ಜೀವಸಾರ್ಥಕತೆ ಸಂಯೋಜಕ ಡಾ. ಕಿಶೋರ ಪಡಕೆ, ಹುಬ್ಬಳ್ಳಿಯ ಕೀಮ್ಸ ನಿರ್ದೇಶಕರಾದ ಡಾ.ದತ್ತಾತ್ರೆಯ ಬಂಟ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ. ವಿ. ಜಾಲಿ, ಮೋಹನ ಪ್ರತಿಷ್ಠಾನದ ಅಧಿಕಾರಿ ಡಾ. ಹೇಮಲ್ ಕನ್ವಿಂದೆ ಆಗಮಿಸಲಿದ್ದು, ಬೀಮ್ಸನ ನಿರ್ದೇಶಕ ಡಾ. ಎಸ್ ಟಿ ಕಳಸದ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಐಸಿಯು ಮುಖ್ಯಸ್ಥ ಡಾ. ಚಿನ್ನಾದುರೈ ಅವರು ಮೃತ ಮೆದಳು, ರೋಗಪತ್ತೆ, ದಾಖಲೆಗಳ ಕುರಿತು, ಅಸ್ಟರ ಆಸ್ಪತ್ರೆಯ ಡಾ. ವಿ. ಅರುಣ ಅವರು ದಾನಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಡಾ. ರವಿರಾಜ ಘೊರ್ಪಡೆ, ಡಾ. ಮಹಾಂತೇಶ ತೋಡ್ಕರ, ಡಾ. ಅಶೋಕ ಕುಮಾರ ಶೆಟ್ಟಿ, ಡಾ. ವಿ. ಎ. ಕೋಠಿವಾಲೆ, ಡಾ. ಶ್ರೀನಿವಾಸ ಗಿರಿಧರ, ಡಾ. ಅಂಬರೀಷ ನೇರ್ಲಿಕರ, ಡಾ. ರವಿಶಂಕರ ನಾಯಕ, ಡಾ. ಸತೀಶ ಪಾಟೀಲ ಹಾಗೂ ಬಾಗಲಕೋಟೆಯ ಡಾ. ಅಮರೇಶ ದೆಗಿನಹಾಳ ಅವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಅಂಗಾಂಗ ಕಸಿ ಸಂಯೋಜಕರಾದ ಪ್ರಮೋದ ಸುಳೀಕೇರಿ (9844366188) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button