Latest

ಮೊಹಮ್ಮದ್ ಮೊಯ್ಸಿನ್ ಅಮಾನತಿಗೆ ಸಿಎಟಿ ತಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಒಡಿಶಾದ ಸಂಬಲ್ಪುರದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನ್ನು ಪರಿಶೀಲಿಸಿದ್ದಕ್ಕಾಗಿ ಚುನಾವಣೆ ಆಯೋಗದಿಂದ ಐಎಎಸ್‌ ಅಧಿಕಾರಿ ಮೊಹಮ್ಮದ್ ಮೊಯ್ಸಿನ್ ಅಮಾನತು ಮಾಡಿದ್ದಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ತಡೆ ನೀಡಿದೆ.

Related Articles

1996ರ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಮೊಹಮ್ಮದ್‌ ಮೊಹ್ಸಿನ್, ವಿಶೇಷ ರಕ್ಷಣಾ ಗುಂಪು ಅಥವಾ ಎಸ್‌ಪಿಜಿ ಸಿಬ್ಬಂದಿ ಬಗ್ಗೆ ನೀಡಿದ್ದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿಲ್ಲ ಎನ್ನುವ ಕಾರಣ ನೀಡಿ ಚುನಾವಣೆ ಆಯೋಗ ಅಮಾನತು ಮಾಡಿತ್ತು.

ಆಯೋಗದ ಈ ನಡೆಗೆ ವಿಪಕ್ಷಗಳು ಕಿಡಿಕಾರಿದ್ದವು ಮತ್ತು ಚುನಾವಣೆ ವೇಳೆಯಲ್ಲಿ ಯಾರೊಬ್ಬರೂ ಈ ರೀತಿಯ ತಪಾಸಣೆಗಳಿಂದ ಹೊರತಾಗಿಲ್ಲ ಎಂದು ಹೇಳಿದ್ದವು.

Home add -Advt

ಇಂದು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ, ಎಸ್ಪಿಜಿ ಸಿಬ್ಬಂದಿ ಯಾವುದಕ್ಕೆ ಮತ್ತು ಎಲ್ಲದಕ್ಕೂ ಅರ್ಹರಾಗಿದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಮತ್ತು ಚುನಾವಣಾ ಅಧಿಕಾರಿಗಳು ಕರ್ನಾಟಕದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಖಾಸಗಿ ವಾಹನಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಪರಿಶೀಲಿಸಿದ್ದಾರೆ ಮತ್ತು ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಒಡಿಶಾ ಮುಖ್ಯಮಂತ್ರಿಯ ವಾಹನವನ್ನು ಕೂಡ ಪರಿಶೀಲಿಸಿದ್ದಾರೆ. ಕರ್ನಾಟಕದಲ್ಲಿ ಕೈಗೊಂಡ ಒಂದು ರ‍್ಯಾಲಿ ವೇಳೆ ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಿಂದ ಕಪ್ಪು ಪೆಟ್ಟಿಗೆಯೊಂದನ್ನು ಕಾರ್‌ನಲ್ಲಿಡಲಾದ ವಿವಾದವನ್ನು ಉಲ್ಲೇಖಿಸಿದ ಟ್ರಿಬ್ಯುನಲ್, “ಅದರ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಸ್ಪಷ್ಟವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದೆ.

ಕರ್ನಾಟಕ ಐಎಎಸ್ ಅಧಿಕಾರಿ ಓಡಿಶಾದಲ್ಲಿ ಸಸ್ಪೆಂಡ್

Related Articles

Back to top button