ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಬೆಳಗಾವಿ ಜಿಲ್ಲೆಯ ಯರಗಟ್ಟಿ ಸೇರಿದಂತೆ ಒಟ್ಟೂ 12 ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಇವುಗಳಲ್ಲಿ ಕೆಲವು ಬಜೆಟ್ ನಲ್ಲಿ ಘೋಷಿಸಿದ್ದ ತಾಲೂಕುಗಳಾದರೆ, ಕೆಲವು ಕಳೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವಾಗಿದೆ.
ಹೊಸ ತಾಲೂಕುಗಳ ಆಡಳಿತಾತ್ಮಕ ಕಚೇರಿ ತೆರೆಯಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ.
ಬೆಳಗಾವಿ ಜಿಲ್ಲೆ – ಯರಗಟ್ಟಿ
ವಿಜಯಪುರ ಜಿಲ್ಲೆ -ಅಲಮೇಲ
ಬಾಗಲಕೋಟ ಜಿಲ್ಲೆ – ತೇರದಾಳ
ರಾಮನಗರ ಜಿಲ್ಲೆ – ಹಾರೋಹಳ್ಳಿ,
ಚಿಕ್ಕಬಳ್ಳಾಪುರ ಜಿಲ್ಲೆ – ಚೇಳೂರು
ಚಿಕ್ಕಮಗಳೂರು – ಕಳಸ
ಕೊಡಗು ಜಿಲ್ಲೆ – ಪೊನ್ನಂಪೇಟೆ
ಕೊಡಗು ಜಿಲ್ಲೆ – ಕುಶಾಲನಗರ
ದಕ್ಷಿಣ ಕನ್ನಡ ಜಿಲ್ಲೆ – ಮುಲ್ಕಿ
ದಕ್ಷಿಣ ಕನ್ನಡ ಜಿಲ್ಲೆ – ಉಲ್ಲಾಳ
ಮೈಸೂರು ಜಿಲ್ಲೆ – ಸಾಲಿಗ್ರಾಮ
ಹಾಸನ ಜಿಲ್ಲೆ – ಶಾಂತಿಗ್ರಾಮ