Kannada NewsLatestNational

*ಉಪವಾಸ ವ್ರತಕ್ಕೆ ಹುರಳಿ ಹಿಟ್ಟು ಸೇವಿಸಿ 85 ಜನರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಉಪವಾಸ ವ್ರತದಲ್ಲಿದ್ದವರು ಹುರುಳಿ ಹಿಟ್ಟು ಅಥವಾ ‘ಕುಟ್ಟು ಕಾ ಅಟ್ಟಾ’ ಸೇವಿಸಿ 85 ಜನರು ಅಸ್ವಸ್ಥರಾಗಿರುವ ಗಹ್ಟನೆ ನಡೆದಿಫ಼್ದೆ.

ಉತ್ತರ ಪ್ರದೇಶದ ಬಾಗ್‌ಪತ್, ಬಿಜ್ನೋರ್, ಬರೇಲಿ ಮತ್ತು ಬುಲಂದ್‌ಶಹರ್ ಜಿಲ್ಲೆಗಳಲ್ಲಿ ಹುರುಳಿ ಹಿಟ್ಟು ಸೇವಿಸಿದ ನಂತರ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ 85 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Home add -Advt

ಕುಟ್ಟು ಕಾ ಅಟ್ಟಾವನ್ನು ಸಾಮಾನ್ಯವಾಗಿ ಉಪವಾಸದ ಆಚರಣೆಗಳ ಸಮಯದಲ್ಲಿ ಸೇವಿಸಲಾಗುತ್ತದೆ. ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಲಂದ್‌ಶಹರ್‌ನ ವಿವಿಧ ಪ್ರದೇಶಗಳಲ್ಲಿ ಹುರುಳಿ ಹಿಟ್ಟು ಸೇವಿಸಿದ ನಂತರ ಜನರು ಅಸ್ವಸ್ಥರಾದರು. ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಇಲಾಖೆ ಹುರಳಿ ಹಿಟ್ಟಿನ ಮೂಲದ ಬಗ್ಗೆ ತನಿಖೆಗೆ ಮುಂದಾಗಿದೆ. ಅಸ್ವಸ್ಥರು ಬೇಎ ಬೇತೆ ಪ್ರದೇಶಗಳಲ್ಲಿ ಹುರಳಿ ಹಿಟ್ಟು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button