Latest

ರಂಜಿಸಿದ “ಗುಲ್ದಸ್ತಾ” ಸಂಗೀತ ಸಂಜೆ ಕಾರ್ಯಕ್ರಮ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ನಿವೇದಾರ್ಪಣ ಅಕಾಡಮಿ ಆಫ್ ಮುಜಿಕ್ ವತಿಯಿಂದ ಆಯೋಜಿಸಿದ ಕರೋಕೇ ಸಂಗೀತ ಸ್ಪರ್ದೆಯಲ್ಲಿ ವಿಜೇತ ರಾದವರಿಂದ “ಗುಲ್ದಸ್ತಾ” ಕನ್ನಡ, ಮರಾಠಿ ಹಾಗೂ ಹಿಂದಿ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿವಿಧ ವಯೋಮಿತಿಯ ಒಟ್ಟು 15 ಹವ್ಯಾಸಿ ಕಲಾವಿದರು ಗೀತೆಗಳನ್ನು ಪ್ರಸ್ತುತಪಡಿಸಿ ಸುಮಾರು 3 ಗಂಟೆ ಗಳ ಕಾಲ ಜನರನ್ನು ರಂಜಿಸಿದರು. ಖ್ಯಾತ ವೈದ್ಯರಾದ ಡಾ. ಮಾಧವ ಪ್ರಭು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಸಂಸ್ಕೃತಿಯಲ್ಲಿ ಸಂಗೀತವನ್ನು ಇನ್ನೊಂದು ವಿಧದ ವೈದ್ಯಕೀಯ ಪದ್ದತಿಯಂತೆಯೇ ಅನುಸರಿಸಿಕೊಂಡು ಬರಲಾಗುತ್ತಿದ್ದು, ಉತ್ತಮ, ಮಧುರ ಸಂಗೀತವು ಸಾಕಷ್ಟು ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು, ಉದಾಹರಣೆ ಸಹಿತ ವಿವರಿಸಿದರು. ಸ್ಪರ್ದಾಳುಗಳಿಗೆ ತರಬೇತಿ ನೀಡಿ, ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಕ್ರಮವನ್ನು ಹಾಗೂ ಸ್ಪರ್ಧಾಳುಗಳು ಇದರ ಸದುಪಯೋಗ ಪಡಿಸಿಕೊಂಡು ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಿದ್ದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಗರದ ಖ್ಯಾತ ಸಂಗೀತ ಕಲಾವಿದರಾದ ಪ್ರಭಾಕರ ಶಹಾಪೂರಕರ, ಗಜಲ್ ಗಾಯಕರಾದ ಶೇಖ ಹಾಗೂ ಗಾಯಕಿ ಮಾಧುರಿ ಮುತಾಲಿಕದೇಸಾಯಿ ಉಪಸ್ಥಿತ ರಿದ್ದರು. ಕನ್ನಡ, ಹಿಂದಿ ಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಗುಲದಸ್ತಾ 2018 ಸ್ಪರ್ಧಾಳುಗಳು ಕಾರ್ಯಕ್ರಮ ಆಯೋಜಿಸಿದ ನಿವೇದಿತಾ ಚಂದ್ರಶೇಖರ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು. ಶಿಲ್ಪಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button