ಪ್ರಗತಿವಾಹಿನಿ ಸುದ್ದಿ, ರಾಮದುರ್ಗ
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಇಂದು ರಾಮದುರ್ಗ ತಾಲೂಕಿನ ವಿವಿಧೆಡೆ ಮತಯಾಚನೆ ಮಾಡುತ್ತಿದ್ದಾರೆ.
ಬನ್ನೂರ್ ತಾಂಡಾ, ಅರಿಬೆಂಚಿ, ದಾಡಿಬಾಯಿ ತಾಂಡಾ ಮೊದಲಾದ ಕಡೆ ತೆರಳಿ ಮತ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ನಮೋ ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸಿದರು. ರಮೇಶ ದೇಶಪಾಂಡೆ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಜೊತೆಗಿದ್ದಾರೆ.