ಪ್ರಗತಿವಾಹಿನಿ ಸುದ್ದಿ, ನವದೆಹಲಿ
ರಾಷ್ಟ್ರದ ಭವಿಷ್ಯ ಬರೆಯುವ, ಕರ್ನಾಟಕದ ಸಮ್ಮಿಶ್ರ ಸರಕಾರದ ಭವಿಷ್ಯ ನಿರ್ಧರಿಸುವ ಬಹುದೊಡ್ಡ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ಶುರುವಾಗಿದ್ದು, ನಂತರ ಇವಿಎಂಗಳನ್ನು ತೆರೆಯಲಾಗುತ್ತದೆ.
ರಾಷ್ಟ್ರಾದ್ಯಂತ ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ವಿಧಾನಸಭೆ ಕ್ಷೇತ್ರವಾರು ಮತ ಎಣಿಕೆ ನಡೆಸಲಾಗುತ್ತದೆ.
ಈಗಾಗಲೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ.