Latest

ರೋಟರಿ ಕ್ಲಬ್ ವತಿಯಿಂದ ಯಳ್ಳೂರು ಶಾಲೆಯಲ್ಲಿ ಶೌಚಾಲಯ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ತಾಲೂಕಿನ ಯಳ್ಳೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಬೆಳಗಾವಿ ಸೌಥ್ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ಶೌಚಾಲಯ ಸಮುಚ್ಚಯವನ್ನು ಶಾಲಾ ಆಡಳಿತಕ್ಕೆ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಮಾಜಿ ಗವರ್ನರ್ ಆನಂದ ಕುಲಕರ್ಣಿ, ಅಧ್ಯಕ್ಷ ಉದಯ ಜೋಶಿ, ಇವೆಂಟ್ ಚೇರಮನ್ ಮನೋಜ ಸುತಾರ, ನಿಲೇಶ ಪಾಟೀಲ, ನಾರಾಯಣ ದೇಶಪಾಂಡೆ, ವೀರಧವಲ ಉಪಾಧ್ಯೆ, ವಿಜಯ ದರಗಶೆಟ್ಟಿ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋಟರಿ ಕ್ಲಬ್ ೮೧ ಸಾವಿರ ರೂಪಾಯಿಗಳ ವೆಚ್ಚದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೌಚಾಲಯ ಸಮುಚ್ಚಯ ನಿರ್ಮಿಸಿದೆ.

Related Articles

Back to top button