Latest

ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ.

2014ರಲ್ಲಿ ಮಾರ್ಚ್ 5ರಂದೇ ಚುನಾವಣೆ ದಿನಾಂಕ ಘೋಷಿಸಲಾಗಿತ್ತು. ಅಂದಿನಿಂದಲೇ ನೀತಿಸಂಹಿತೆಯೂ ಜಾರಿಯಾಗಿತ್ತು.

ಆದರೆ ಈ ಬಾರಿ ಈಗಾಗಲೆ 2 ದಿನ ವಿಳಂಬವಾಗಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಚುನಾವಣೆ ದಿನಾಂಕ ಘೋಷಿಸಬಹುದು.

Home add -Advt

ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಚುನಾವಣೆ ಆಯೋಗ ಕೆಲಸ ಮಾಡುತ್ತಿದೆ. ಅವರ ಸೂಚನೆಯಂತೆ ಚುನಾವಣೆ ದಿನಾಂಕ ಘೋಷಣೆಗೆ ವಿಳಂಬ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಆದರೆ ಚುನಾವಣೆ ಆಯೋಗ ಇದಕ್ಕೆ ಖಡಕ್ ಪ್ರತ್ಯುತ್ತರ ನೀಡಿದೆ. ನಮಗೆ ಯಾರ ನಿರ್ದೇಶನ ಅಗತ್ಯವಿಲ್ಲ. ಯಾವಾಗ ಘೋಷಣೆ ಮಾಡಬೇಕೆನ್ನುವುದು ನಮಗೆ ಗೊತ್ತಿದೆ. 2014ರಲ್ಲಿ ಮೇ 31ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕಿತ್ತು. ಆದರೆ ಈ ಬಾರಿ ಜೂನ್ 3ರ ವರೆಗೆ ಸಮಯಾವಕಾಶವಿದೆ. ಅಲ್ಲದೆ ಕೆಲ ರಾಜ್ಯಗಳಲ್ಲಿ ಸಿದ್ಧತೆ ಇನ್ನೂ ನಡೆಯುತ್ತಿದೆ. ಅದಾದ ತಕ್ಷಣ ಚುನಾವಣೆ ದಿನಾಂಕ ಘೋಷಿಸಲಾಗುವುದು ಎಂದು ಆಯೋಗ ಹೇಳಿದೆ.

ಇದನ್ನೆಲ್ಲ ಗಮನಿಸಿದರೆ ಶುಕ್ರವಾರ ಇಲ್ಲವೇ ಸೋಮವಾರ ಚುನಾವಣೆ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಕಾಣುತ್ತಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button