Latest

ವಾಜಪೇಯಿ ಅವರ ಭವಿಷ್ಯ ವಾಣಿ ಇಂದು ನಿಜವಾಗಿದೆ, ಏನದು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕಾಂಗ್ರೆಸ್‌ನ ಇಂದಿನ ಹೀನಾಯ ಸ್ಥಿತಿ 1997ರಲ್ಲಿ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಡಿದ ಮಾತುಗಳ ಪ್ರತಿಬಿಂಬದಂತಿದೆ.

1996ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 161 ಸೀಟುಗಳನ್ನು ಗೆದ್ದಿತ್ತು. ಅತಿ ದೊಡ್ಡ ಪಕ್ಷವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಲಾಗಿತ್ತು. ಇದು ಕೇಂದ್ರದಲ್ಲಿ ಬಿಜೆಪಿಯ ಮೊಟ್ಟಮೊದಲ ಸರ್ಕಾರವಾಗಿತ್ತು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಕೇವಲ 13 ದಿನಗಳಲ್ಲಿ ಸರ್ಕಾರ ಪತನಗೊಂಡಿತ್ತು. ಆಗ ಬಿಜೆಪಿ ಸಂಸದರ ಸಂಖ್ಯೆಯನ್ನು ಕಂಡು ಕಾಂಗ್ರೆಸ್ ಅಣಕವಾಡಿತ್ತು. ಒಬ್ಬ ಸಂಸದನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಗೇಲಿ ಮಾಡಿತ್ತು.

1997ರಲ್ಲಿ ಸಂಸತ್‌ನಲ್ಲಿ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿ, ‘ನನ್ನ ಮಾತು ಬರೆದಿಟ್ಟುಕೊಳ್ಳಿ. ಇಂದು ನೀವು (ಕಾಂಗ್ರೆಸ್) ಕಡಿಮೆ ಸಂಸದ/ಶಾಸಕರನ್ನು ಹೊಂದಿರುವುದಕ್ಕೆ ನಮ್ಮತ್ತ ನೋಡಿ ನಗುತ್ತಿದ್ದೀರಿ. ಆದರೆ, ಭಾರತದಾದ್ಯಂತ ನಾವು ಅತ್ಯಧಿಕ ಸಂಖ್ಯೆಯ ಸಂಸದರು/ಶಾಸಕರ ಮೂಲಕ ನಮ್ಮದೇ ಸರ್ಕಾರ ರಚಿಸುವ ದಿನ ಬರುತ್ತದೆ. ಆ ದಿನ ಈ ದೇಶ ನಿಮ್ಮತ್ತ ನೋಡಿ ನಗುತ್ತಾರೆ. ನಿಮ್ಮ ಬಗ್ಗೆ ಹಾಸ್ಯ ಮಾಡುತ್ತಾರೆ’ ಎಂದಿದ್ದರು.

ಹೊರಗಿನ ಶಕ್ತಿಯಾಗಿ ಇರುವುದು ಕಾಂಗ್ರೆಸ್‌ಗೆ ಬಹಳ ಕಷ್ಟ. ಅವರು ಮರಳಿ ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡುತ್ತಾರೆ. ನಾವು ಹಾಗಲ್ಲ. ನಾವು ವಿರೋಧಪಕ್ಷದಲ್ಲಿ 40 ವರ್ಷಗಳನ್ನು ಕಳೆದಿದ್ದೇವೆ. ಅಗತ್ಯಬಿದ್ದರೆ ಇನ್ನೂ 40 ವರ್ಷ ಇರುತ್ತೇವೆ. ಆದರೆ, ಕಾಂಗ್ರೆಸ್ ಪಕ್ಷ ಹಾಗಲ್ಲ. ಅಧಿಕಾರವನ್ನು ಮರುವಶಪಡಿಸಿಕೊಳ್ಳುವ ಪ್ರಯತ್ನಿಸಲು ರಾಜಕೀಯ ಆಟವಾಡದೆ ಕಾಂಗ್ರೆಸ್ 40 ತಿಂಗಳು ಕೂಡ ಇರಲಾರದು. ಏಕೆಂದರೆ ಅಧಿಕಾರವಿಲ್ಲದಿದ್ದರೆ ಅವರು ಏನೂ ಅಲ್ಲ ಎಂದು ವಾಜಪೇಯಿ ಹೇಳಿದ್ದರು.

ಇಂದು ಅವರ ಭವಿಷ್ಯ ವಾಣಿ ನಿಜವಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button