ಪ್ರಗತಿವಾಹಿನಿ ಸುದ್ದಿ, ವಾರಣಾಸಿ
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಲ್ವರು ಸೂಚಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮೋದಿ ನಾಮಪತ್ರ ಸಲ್ಲಿಸಿ ಹೊರಬಂದಿದ್ದಾರೆ.
ವಾರಣಾಸಿಯಲ್ಲಿ ನನಗೆ ಪ್ರಬಲವಾದ ಪ್ರತಿಸ್ಪರ್ಧಿ ಇರಬೇಕಿತ್ತು. ಸ್ಪರ್ಧೆ ಇಲ್ಲ ಎಂದು ಮಾಧ್ಯಮದವರೂ ಕ್ಷೇತ್ರವನ್ನು ಮರೆತುಬಿಡುತ್ತಾರೆ. ಸ್ಪರ್ಧೆ ಇಲ್ಲ ಎಂದು ಜನರು ಮತ ಹಾಕಲು ಮರೆಯಬಾರದು. ಎಲ್ಲರೂ ಮತದಾನ ಮಾಡಬೇಕು ಎಂದು ವಿನಂತಿಸಿದರು. ಪುರುಷರಿಗಿಂತಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಪ್ರಧಾನಿ ಕರೆ ನೀಡಿದರು.
ನಾಮಪತ್ರ ಸಲ್ಲಿಕೆ ನಂತರ ಮೋದಿ ಅಲ್ಲಿಂದ ಮಧ್ಯಪ್ರದೇಶದತ್ತ ತೆರಳಿದರು. ಚುನಾವಣೆಗೆ ಮುನ್ನ ಮತ್ತೆ ಇಲ್ಲಿಗೆ ಬರುವ ಸಾಧ್ಯತೆ ಇಲ್ಲ ಎನ್ನುವ ಸುಳಿವನ್ನು ಅವರು ನೀಡಿದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎನ್ ಡಿಎ ಮಿತ್ರ ಪಕ್ಷಗಳ ಎಲ್ಲ ನಾಯಕರೂ ಉಪಸ್ಥಿತರಿದ್ದರು.
ಗುರುವಾರ ನಡೆದ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಇಡೀ ವಾರಣಾಸಿ ಕೇಸರಿಮಯವಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ