Latest

ವಿಜ್ಞಾನ- ತಂತ್ರಜ್ಞಾನ ಉದ್ಯೋಗದಾತರಿಂದ ಉದ್ಯಮ ನಿರೀಕ್ಷೆ -ಉಪನ್ಯಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗ ಮತ್ತು ತರಬೇತಿ ವಿಭಾಗದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯೋಗದಾತರಿಂದ ಉದ್ಯಮ ನಿರೀಕ್ಷೆಗಳು ಎನನುವ ಕುರಿತು ಉಪನ್ಯಾಸ ನಡೆಯಿತು.

ಬೆಂಗಳೂರಿನ ವಿಪ್ರೋ ಸಂಸ್ಥೆಯ ಜನರಲ್ ಮ್ಯಾನೇಜರ್ ಮತ್ತು ಮುಖ್ಯಸ್ಥ ರಾಜೀವ ಕುಲಕರ್ಣಿ ಅವರು  ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ಇಂದು ನಿರ್ದಿಷ್ಟವಾಗಿ ಐಟಿ ಉದ್ಯಮವು ಹೊಸ ಪದವೀಧರರು ಯೋಜನೆಗಳಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆಂದು ನಿರೀಕ್ಷಿಸುತ್ತದೆ. ಪ್ರತಿ ವರ್ಷ ಹೊಸ ಟೆಕ್ನಾಲಜಿ ಬರಲಿದೆ.  ಉದ್ಯಮದಲ್ಲಿ ಉಳಿದುಕೊಂಡು  ಕಲಿಕೆಯ ದಾರಿಯಲ್ಲಿ ಇರಬೇಕು ಮತ್ತು ಹೊಸ ತಂತ್ರಜ್ಞಾನವು ಬಂದಾಗ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗದ ಡಾ. ಸಿದ್ಧರಾಮ ಸ್ವಾಮಿಗಳು ರಾಜೀವ ಕುಲಕರ್ಣಿ ಅವರನ್ನು ಸನ್ಮಾನಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ  ಡಾ. ಸಿದ್ಧರಾಮಪ್ಪ ಇಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಉದ್ಯಮದಲ್ಲಿ ಇತ್ತೀಚಿನ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಉದ್ಯಮದ ಪ್ರತಿಭಾವಂತರ ಸಭೆಗಳಿಗೆ ಹಾಜರಾಗಲು ಹಾಗೂ ಈ ನಿಟ್ಟಿನಲ್ಲಿ ತಮ್ಮನ್ನು ತಾವೇ ಉನ್ನತೀಕರಿಸಿಕೊಳ್ಳಬೇಕೆಂದು ತಿಳಿಸಿದರು.
ರವೀಂದ್ರ ಯರಗಟ್ಟಿಮಠ ಸ್ವಾಗತಿಸಿದರು. ಮಹಾವಿದ್ಯಾಲಯದ ಚೇರಮನ್‌  ಎಸ್. ಜಿ.ಸಂಬರಗಿಮಠ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಪದ್ಮಾ ,  ಅನುಷಾ ಅವರು  ಗಣ್ಯರ ಪರಿಚಯ ಮಾಡಿಕೊಟ್ಟರು.   ಅಪೂರ್ವಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಸೌಮ್ಯಶ್ರೀ ವಂದನಾರ್ಪಣೆ ಸಲ್ಲಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button