Latest

ವಿಟಿಯು ವಿಭಜನೆ ಕೈಬಿಡುವುದಾಗಿ ಸಿಎಂ ಭರವಸೆ -ಸತೀಶ್ ಜಾರಕಿಹೊಳಿ

ತಪ್ಪು ಮಾಹಿತಿಯಿಂದ ವಿಟಿಯು ವಿಭಜನೆಗೆ ನಿರ್ಧರಿಸಲಾಗಿತ್ತು ಎಂದರಂತೆ ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ನಿರ್ಧಾರವನ್ನು ಕೈ ಬಿಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಪ್ರಗತಿವಾಹಿನಿಗೆ ಈ ವಿಷಯ ತಿಳಿಸಿದ ಸಚಿವರು, ಕೆಲವು ತಪ್ಪು ಮಾಹಿತಿಯಿಂದಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಸಿಎಂ ತಿಳಿಸಿದ್ದಾರೆ ಎಂದರು.

Home add -Advt

ಸಚಿವರುಗಳಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಮನಗೂಳಿ, ಆರ್.ಬಿ.ತಿಮ್ಮಾಪುರ ಹಾಗೂ ಹಲವಾರು ಶಾಸಕರು ಸೇರಿ ಮುಖ್ಯಮಂತ್ರಿಗಳನ್ನು ಮಂಗಳವಾರ ರಾತ್ರಿ ಭೇಟಿಯಾಗಿದ್ದೆವು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಭಜನೆ ಕೈಬಿಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಸಬಂಧ ಪ್ರತಿಭಟನೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಗಳು 4-5 ಮಂತ್ರಿಗಳು ಮತ್ತು ಶಾಸಕರ ಸಮ್ಮುಖದಲ್ಲಿ ಸ್ಪಷ್ಟ ಭರವೆಸ ನೀಡಿರುವುದರಿಂದ  ಪ್ರತಿಭಟನೆ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಜಾರಕಿಹೊಳಿ ಹೇಳಿದರು. 

 ಅಧಿವೇಶನದಲ್ಲೇ ಎತ್ತುತ್ತೇವೆ: 

ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮುಖ್ಯಮಂತ್ರಿಗಳು ವಿಟಿಯು ವಿಭಜನೆ ಕೈ ಬಿಡುವುದಾಗಿ ನಿನ್ನೆ ರಾತ್ರಿ ಭೇಟಿಯಾದ ನಿಯೋಗಕ್ಕೆ ಮೌಖಿಕ ಭರವಸೆ ನೀಡಿದ್ದಾರೆ. ಆದಾಗ್ಯೂ ಇಂದು ಸದನದಲ್ಲೇ ಈ ವಿಷಯ ಎತ್ತಿ ಅಲ್ಲೇ  ಅಧಿಕೃತವಾಗಿ ಘೋಷಣೆ ಮಾಡುವಂತೆ ಮಾಡುತ್ತೇವೆ ಎಂದರು.

ಪ್ರಗತಿವಾಹಿನಿಯೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ನಿನ್ನೆ ರಾತ್ರಿ ಅಧಿವೇಶನ ಮುಗಿದ ಬಳಿಕ ಹಲವಾರು ಸಚಿವರು, ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ಆಗ ಅವರು ವಿಟಿಯು ವಿಭಜನೆ ನಿರ್ಧಾರ ಕೈಬಿಡುವುದಾಗಿ ತಿಳಿಸಿದ್ದಾರೆ. ಇಂದು ಅಥವಾ ನಾಳೆ ಸದನದಲ್ಲೇ ಘೋಷಣೆ ಮಾಡಬಹುದು ಎಂದರು.

ಮುಖ್ಯಮಂತ್ರಿಗಳು ಮೌಖಿಕ ಭರವಸೆ ನೀಡಿದರೂ ಅಧಿಕೃತವಾಗಿ ಘೋಷಿಸಲಿ ಎಲ್ಲುನ ಉದ್ದೇಶದಿಂದ ಬುಧವಾರ 50ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿರುವ ಪತ್ರವನ್ನು ಅವರಿಗೆ ಸಲ್ಲಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಕ್ಕೂ ಮೊದಲು ನಡೆದ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಮನಗೂಳಿ, ಶಿವಾನಂದ ಪಾಟೀಲ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನೀಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ್, ಅರುಣ ಶಹಾಪುರ, ಹನುಮಂತ ನಿರಾಣಿ ಮೊದಲಾದವರಿದ್ದರು. 

ವಿಟಿಯು ವಿಭಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ಮಾಧ್ಯಮಗಳೂ ಬೆಂಬಲಿಸಿ, ಸಾಕಷ್ಟು ಪ್ರಚಾರ ನೀಡುತ್ತಿವೆ. ಹಾಗಾಗಿ ಬೆಳಗಾವಿಯಲ್ಲಿ ನೂರಾರು ಸಂಘಟನೆಗಳ ಜೊತೆಗೆ ಜನಾಂದೋಲನವಾಗಿ ಮಾರ್ಪಟ್ಟಿದೆ.

ವಿಟಿಯು ವಿಭಜನೆ ಸಂಬಂಧ ಪ್ರಗತಿವಾಹಿನಿ ಪ್ರಕಟಿಸಿದ ಸರಣಿ ವರದಿಗಳು ಇಲ್ಲಿವೆ:

ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು

ವಿಟಿಯು ವಿಭಜನೆ ವಿರೋಧಿಸಿ ಹೋರಾಟಕ್ಕೆ ಸ್ವಾಭಿಮಾನಿ ಬೆಳಗಾವಿಗರು ಸಜ್ಜು

ಸರಕಾರವೇ ರಾಜ್ಯ ಒಡೆಯಲು ಹೊರಟಂತಿದೆ -ಕೋರೆ ಆಕ್ರೋಶ

ನಾಳೆಯೇ ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ -ಅಂಗಡಿ

ಸೇವ್ ವಿಟಿಯು: ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವರು, ಶಾಸಕರು

ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ

ವಿಟಿಯು ವಿಭಜನೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಸೇವ್ ವಿಟಿಯು: ಅಭಯ ಪಾಟೀಲ ಸಹಿ ಆಂದೋಲನ; 23 ಶಾಸಕರ ಸಹಿ

ಸೇವ್ ವಿಟಿಯು: ಸಿಎಂಗೆ ನಾಳೆ ಅಭಯ ಪಾಟೀಲ ಸಲ್ಲಿಸುವ ಪತ್ರದಲ್ಲೇನಿದೆ?

ವಿಟಿಯು ವಿಭಜನೆಗೆ ಹಣಮಂತ ನಿರಾಣಿ ವಿರೋಧ

ವಿಟಿಯು ಇಬ್ಬಾಗಿಸದಂತೆ  ಒತ್ತಾಯಸಿ  ಕರ್ನಾಟಕ ನವ ನಿರ್ಮಾಣ ಪಡೆ ಪ್ರತಿಭಟನೆ

ಸೇವ್ ವಿಟಿಯು: ಮಂಗಳವಾರ ಮಹತ್ವದ ಸಭೆ

ವಿಟಿಯು ವಿಭಜನೆಗೆ ಪ್ರಭಾವಿಗಳ ಕೈವಾಡ!; ಡಿಸೆಂಬರ್ ನಲ್ಲೇ ಪ್ರಕ್ರಿಯೆ ಆರಂಭವಾಗಿತ್ತು!

ವಿಟಿಯು ವಿಭಜನೆ ಉ. ಕರ್ನಾಟಕ ವಿರೋಧಿ ಕ್ರಮ ; ಎಂಎಲ್ಸಿ ಅರುಣ ಶಹಾಪುರ

ವಿಟಿಯು ವಿಭಜನೆ ನಿರ್ಧಾರ ಹಿಂದಕ್ಕೆ ಪಡೆಯಿರಿ -ಟೋಪಣ್ಣವರ್

ವಿಟಿಯು ವಿಷಯದಲ್ಲಿ ಜನರ ಭಾವನೆಯೊಂದಿಗೆ ಆಟವಾಡಬೇಡಿ -ನಾಡಗೌಡ

ಸೇವ್ ವಿಟಿಯು:ನಾಳೆ ಬೃಹತ್ ಪ್ರತಿಭಟನಾ ಸಭೆ; ಪ್ರಗತಿವಾಹಿನಿ ಇಂಪ್ಯಾಕ್ಟ್

 

Related Articles

Back to top button