ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ವಿಧಾನಸೌಧದಲ್ಲಿ 25.7 ಲಕ್ಷ ರೂ. ಬ್ಯಾಗ್ ಪತ್ತೆಯಾದ ಪ್ರಕರಣದ ಪ್ರಮುಖ ಆರೋಪ ಮೋಹನ್ ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಣ ಸಾಗಿಸುತ್ತಿದ್ದಾಗ ಮೋಹನ್ ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿ, ಪ್ರಕರಣವನ್ನು ಎಸಿಬಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಮೋಹನ್ ನನ್ನು ಬಂಧಿಸಲಾಗಿದೆ. ಅಲ್ಲದೆ ಆತ ಬಳಸುತ್ತಿದ್ದ ಕಂಪ್ಯೂಟರ್ ಮತ್ತು 2 ಮೊಬೈಲ್ ಗಳನ್ನು ಹ ವಶಪಡಿಸಿಕೊಳ್ಳಲಾಗಿದೆ.
ಮೋಹನ್ ರಾಜ್ಯ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಟೈಪಿಸ್ಟ್ ಆಗಿದ್ದು, ಸಚಿವರ ಪರವಾಗಿಯೇ ಲಂಚ ಪಡೆದು ಮೋಹನ್ ಸಾಗಿಸುತ್ತಿದ್ದ ಎಂದು ಆರೋಪಿಸಲಗಿತ್ತು. ಹಾಗಾಗಿ ಸಚಿವರ ರಾಜಿನಾಮೆಗೆ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ