ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವೆಲ್ಲಿಂಗಕರ್ ಮ್ಯಾನೇಜಮೆಂಟ್ ಹಾಗೂ ರಿಸರ್ಚ್ ಸ್ಕೂಲ್ ವತಿಯಿಂದ ನಗರದ ಹಿಂದವಾಡಿಯ ಕೆಎಲ್ಎಸ್ ಐಎಂಈ ಆರ್ ನಲ್ಲಿ ಫೆ.25 ರಂದು ಸಂಜೆ 5ಕ್ಕೆ ‘ವ್ಯಾಪಾರ, ವ್ಯವಹಾರ ಅಭಿವೃದ್ಧಿ’ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ.
ಮುಂಬಯಿಯ ಪ್ರಾಧ್ಯಾಪಕ ಶೈಲೇಶ ಕಾಳೆ ಹಾಗೂ ವೆಲ್ಲಿಂಗಕರ್ ಸ್ಕೂಲ್ ವಿದ್ಯಾರ್ಥಿ ಪಿಯೂಶ್ ಚಂಡಕ್ ಉಪನ್ಯಾಸ ನೀಡಲಿದ್ದಾರೆ.
ಸಾರ್ವಜನಿಕರಿಗೆ ಪ್ರವೇಶ ಉಚಿತವಿದ್ದು ಮೊ; 9021103674 ಗೆ ಮಿಸ್ಡ್ ಕಾಲ್ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.