ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಸಿಟಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕ ಶಾಸಕ ಅನಿಲ ಬೆನಕೆ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಿದರು.
ಶ್ರೀ ರೇಣುಕಾ ದೇವಿ ಯಾತ್ರಾ ಜಾಗವನ್ನು ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಿದ ಶಾಸಕರು, ಸಿಟಿ ಬಸ್ ನಿಲ್ದಾಣ ಸ್ಮಾರ್ಟ ಸಿಟಿ ಅಡಿಯ ಕಾಮಗಾರಿಯಾಗಿದ್ದು ಅಚ್ಚುಕಟ್ಟಾಗಿ ನಿರ್ಮಾಣ ಮಾಡಬೇಕು ಹಾಗೂ ಪ್ರಯಾಣಿಕರಿಗೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದೆಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು, ಪ್ರಯಾಣಿಕರಿಗೆ ಸಿಟಿ ಬಸ್ ನಿಲ್ದಾಣದಲ್ಲಿ ತಂಗಲು ಹೆಚ್ಚುವರಿ ಶೆಡ್‌ಗಳನ್ನು ಹೊಸದಾಗಿ ನಿರ್ಮಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ವಿಭಾಗೀಯ ನಿಲ್ದಾಣಾಧಿಕಾರಿ ಎಂ.ಆರ್. ಮುಂಜಿ, ಸ್ಮಾರ್ಟ ಸಿಟಿ ಸಹಾಯಕ ಅಭಿಯಂತರ ಕಡಬಿ, ಡಿಪೊ ವ್ಯವಸ್ಥಾಪಕ ಲಿಂಗರಾಜ ಲಾಟಿ, ನಿತಿನ ಗಡಾದ, ಗುತ್ತಿಗೆದಾರರು, ಅಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷರ ಸಂಜಯ ರಾಜಸ, ರಾಜು ಪುಣ್ಯಾಗೊಳ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ