Latest

ಶಿರಸಿಯ ನಿಸರ್ಗ ಮನೆಯಲ್ಲಿ ಡಾ. ಆನಂದ ಗುರೂಜಿ

ಪ್ರಗತಿವಾಹಿನಿ ಸುದ್ದಿ, ಶಿರಸಿ :

ಇಲ್ಲಿಯ ವೇದ ಆರೋಗ್ಯ ಕೇಂದ್ರದ ನಿಸರ್ಗ ಮನೆಗೆ ಮಹರ್ಷಿ ಡಾ. ಆನಂದ ಗುರೂಜಿ ಅವರು ಆಗಮಿಸಿ ಡಾ. ವೆಂಕಟ್ರಮಣ ಹೆಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ನಿಸರ್ಗ ಮನೆಯ ಚಿಕಿತ್ಸೆಯನ್ನು ನೋಡಿ ತುಂಬಾ ಸಂತೋಷ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನಿಸರ್ಗ ಮನೆಯ ವತಿಯಿಂದ ಡಾ. ಆನಂದ್ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿರುವ ಗುರೂಜಿ ಅವರು, ಆಹಾರ ಔಷಧಿ ಯಾಗಬೇಕು, ಆದರೆ ಔಷಧಿಯೇ ಆಹಾರವಾಗುತ್ತಿರುವುದು ದುರದೃಷ್ಟಕರ. ನಾವು ನಮ್ಮ ಆರೋಗ್ಯವನ್ನು ಆಧುನಿಕ ಭರಾಟೆಯಲ್ಲಿ ಕೆಡಿಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಇಂತಾ ನಿಸರ್ಗ ಮನೆಗೆ ಬಂದು ನಿಸರ್ಗ ಚಿಕಿತ್ಸೆ ಪಡೆದು ಆರೋಗ್ಯವಂತರಾಗುವ ಒಂದು ಭಾಗ್ಯವನ್ನು ಪಡೆದುಕೊಳ್ಳುವುದು ಅವಶ್ಯಕತೆ ಇದೆ. ಆಧುನಿಕ ಭರಾಟೆಯಲ್ಲಿ ನಾವು ನಮ್ಮ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ನಿಸರ್ಗವನ್ನು ಹಾಳು ಮಾಡುತ್ತಿದ್ದೇವೆ. ಆದರೆ ಇಲ್ಲಿ ಅದ್ಭುತವಾದ ಪರಿಸರವಿದೆ. ರೋಗಿಗಳನ್ನು ರೋಗಿಗಳು ಎಂದು ಭಾವಿಸದೆ ಸಾಧಕರೆಂದು ಭಾವಿಸಿ ಅವರಿಗೆ ಚಿಕಿತ್ಸೆ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿರುವ ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಅವರು, ಶಿರಸಿಯಲ್ಲಿ ಇಂತಹ ಅಪರೂಪದ ನಿಸರ್ಗ ಮನೆ ಇರುವುದು ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ತಿಳಿದು ನಾವು ಹತ್ತು ದಿನಗಳವರೆಗೆ ಚಿಕಿತ್ಸೆಯನ್ನು ಪಡೆದುಕೊಂಡಿದ್ದೇವೆ. ಇಲ್ಲಿ ದೇಶ ವಿದೇಶದಿಂದ ಜನ ಬರುತ್ತಾರೆ. ಅವರಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವರ ಕಾಯಿಲೆಗೆ ಶಾಶ್ವತ ಪರಿಹಾರವನ್ನು ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ನಿಸರ್ಗ ಮನೆಗೆ ಎಲ್ಲರೂ ಬರುತ್ತಿದ್ದಾರೆ. ಅವರನ್ನು ನಿರಾಸೆ ಮಾಡದೇ ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಿ ಗುಣಮುಖರನ್ನಾಗಿ ಮಾಡಿ ಕಳುಹಿಸುತ್ತಿರುವುದು ನಿಜಕ್ಕೂ ಕೂ‌‌‌‌ಡ ಹೆಮ್ಮೆಯ ವಿಚಾರ. ನಾವು ಕೂಡ ಇಲ್ಲಿ ಬಂದು ಚಿಕಿತ್ಸೆಯನ್ನು ಪಡೆದಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.

ಡಾ. ವೆಂಕಟ್ರಮಣ ಹೆಗಡೆ ಅವರು ಮಾತನಾಡಿ ಶ್ರೀಶೈಲದ ಜಗದ್ಗುರುಗಳು, ಗಂಗಾವತಿ ಪ್ರಾಣೇಶ್ ಅಂತವರು ‌ ಇಲ್ಲಿ ಬಂದು ಚಿಕಿತ್ಸೆಯನ್ನು ಪಡೆದು ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ. ಇದೀಗ ಆನಂದ ಗುರೂಜಿ ಅವರು ಬಂದಿರುವುದು ನಮಗೆ ತುಂಬಾ ಸಂತೋಷವನ್ನು ನೀಡಿದೆ ಎಂದರು.

ಬೈಲಹೊಂಗಲದ ಮಹಾಂತೇಶ ಶಾಸ್ತ್ರಿಗಳು, ಅರುಣ ಐಹೊಳೆ, ಬೆಳಗಾವಿಯ ಡಾ. ನಂದೀಶ್, ವಿರುಪಾಕ್ಷಯ್ಯ ನೀರಲಗಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಗೀತ ವಿದುಷಿ ಮಾನಸ ಹೆಗಡೆ ಅವರ ಸಂಗೀತ ಕಾರ್ಯಕ್ರಮ ಅದ್ಭುತವಾಗಿ ಜರುಗಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button