Latest

ಶುದ್ಧ ಕುಡಿಯುವ ನೀರಿನ ಘಟಕ  ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ

ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಶುದ್ದ  ಕುಡಿಯುವ ನೀರಿನ ಸಲುವಾಗಿ ಹಲವಾರು ಯೋಜನೆಗಳು ರೂಪಿಸಿದೆ. ಆದರೆ ಜನರಿಗೆ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ಹಾಗಾಗಿ  ಸಾಮಾನ್ಯ ಜನರು ಹಲವಾರು ಕಾಯಿಲೆಗೆ ತುತ್ತಾಗಿದ್ದಾರೆ. ಆದಕ್ಕಾಗಿ ಗ್ರಾಮಿಣ ಭಾಗದಲ್ಲಿ ಸಾಮಾಜಿಕ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು  ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಇಂದು ಲಕ್ಷ್ಮಣ ಸೂರ್ಯವಂಶಿ ಮೆಮೋರಿಯಲ್, ಶಿವತೇಜ ಸೋಶಿಯಲ್ ಫೌಂಡೇಶನ್ ಹಾಗೂ ರೂಪಿಕಾ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸಹಯೋಗದಲ್ಲಿ ಪ್ರಾರಂಭಿಸಲಾದ ಶುದ್ಧ ಕುಡಿಯುವ ನೀರಿನ ಘಟಕ  ಉದ್ಘಾಟಿಸಿ  ಮಾತನಾಡತ್ತಿದ್ದರು.

ಈ ವೇಳೆ ಶಂಕರ ಗುರುಜಿ, ದತ್ತಾ ಕುರಾಡೆ, ಸದಾಶಿವ ಬೆಳವಿ, ದಾದು ಕಾಗವಾಡೆ, ಜಯಪಾಲ ಬೋರಗಾವೆ, ಶಿವಾನಂದ ಕರೋಶಿ, ಸಂಜಯ ಪಾಟಿಲ, ಆಣ್ಣಾಪ್ಪಾ ಬೋರಗಾವೆ, ಮಹಾವೀರ ಸುಂಕೆ, ದೀಪಕ ಇನಾಮದಾರ, ವಿಜಯ ಜಾಧವ, ಸುನೀಲ ಪವಾರ, ಸುರೇಶ ಮೋಹಿತೆ, ರಾಜಶೇಖರ ಕೋಳಿ, ಅನಿಲ ಪವಾರ, ಪ್ರಮೋದ ಮಟಕರ, ರಾಜು ದಡ್ಡೆ, ಲಕ್ಷ್ಮಣ ಶಿಂಗಾಡೆ, ಶೇಖರ ನೋರಜೆ, ಈರಾಣ್ಣಾ ಮಠಪತಿ ಹಾಗೂ ಲಕ್ಷ್ಮಣ ಸೂರ್ಯವಂಶಿ ಮೆಮೋರಿಯಲ್, ಶಿವತೇಜ ಸೋಶಿಯಲ್ ಫೌಂಡೇಶನ್ ಹಾಗೂ ರೂಪಿಕಾ ಕೋ ಆಪ ಕ್ರೆಡಿಟ್ ಸೋಸಾಯಟಿಯ ನಿರ್ದೆಶಕರು, ಸದಸ್ಯರು ಮತ್ತು ಯಡೂರ, ಮಾಂಜರಿ, ಚಂದುರ ಗ್ರಾಮದ ನಾಗರಿಕರು ಹಾಜರಿದ್ದರು. ಸಂಸ್ಥೆಯ ಸಂಸ್ಥಾಪಕ ಅಜಯ ಸೂರ್ಯವಂಶಿ ಸ್ವಾಗತಿಸಿದರು. ಅಧ್ಯಕ್ಷರಾದ ಅಮರ ಬೋರಗಾವೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button