ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಬಾಂಬ್ ದಾಳಿಯಿಂದ ತತ್ತರಿಸಿರುವ ಶ್ರೀಲಂಕಾಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ಭಾರತೀಯರಿಗೆ ಭಾರತದ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
ಈಸ್ಟರ್ ಭಾನುವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 250 ಕ್ಕಿಂತಲೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಶ್ರೀಲಂಕಾಗೆ ಅನಗತ್ಯ ಪ್ರಯಾಣವನ್ನು ಬೆಳೆಸದಿರಿ ಎಂದು ಭಾರತದ ನಾಗರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಏ. 21ರಂದು ಉಗ್ರ ದಾಳಿಯಾದ ಬಳಿಕ ಶ್ರೀಲಂಕಾದಾದ್ಯಂತ ಭದ್ರತೆಯ ದೃಷ್ಠಿಯಿಂದ ಶ್ರೀಲಂಕಾಕ್ಕೆ ಪ್ರಯಾಣಿಸಲು ಉದ್ದೇಶಿಸಿರುವ ಭಾರತೀಯರು ಅನಗತ್ಯ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.
ಶ್ರೀಲಂಕಾ ಸರ್ಕಾರವು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ರಾತ್ರಿ ಸೇರಿದಂತೆ ಎಲ್ಲೆಡೆ ಕರ್ಫ್ಯೂ ಜಾರಿಯಿದ್ದು, ದೇಶಾದ್ಯಂತ ಇರುವ ತುರ್ತು ಪರಿಸ್ಥಿತಿಯಿಂದಾಗಿ ಈ ವೇಳೆ ಪ್ರಯಾಣದ ಮೇಲೆ ಪರಿಣಾಮ ಬೀರಲಿದೆ.
ಅಗತ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಬೆಳೆಸಲೇ ಬೇಕಾಗಿದ್ದರೆ ಕೊಲಂಬೋದ ಭಾರತದ ಹೈ ಕಮೀಷನ್ ಅಥವಾ ಯಾವುದೇ ಸಹಾಯದ ಅಗತ್ಯವಿದ್ದರೆ ಕ್ಯಾಂಡಿ ಅಥವಾ ಕಾನ್ಸುಲೇಟ್ ಸಹಾಯಕ ಹೈ ಕಮಿಷನ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಇದಲ್ಲದೆ ಭಾರತೀಯ ಹೈ ಕಮಿಷನ್‌ನ ಸಹಾಯವಾಣಿ ನಂಬರ್ ಲಭ್ಯವಿದ್ದು, ಮಿಷನ್ ವೆಬ್‌ಸೈಟ್‌ನಲ್ಲಿ ಇವುಗಳನ್ನು ಪಡೆಯಬಹುದು ಎಂದು ತಿಳಿಸಿದೆ.