ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆರ್ಥಿಕ ಸಂಕಷ್ಟದಲ್ಲಿದ್ದ ರೋಗಿಯೊಬ್ಬರಿಗೆ ಇಲ್ಲಿಯ ನಿಯತಿ ಫೌಂಡೇಶನ್ ನೆರವು ನೀಡಿದೆ.
ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಸ್ತೂರಿ ಬಡಿಗೇರ ಎನ್ನುವ ಮಹಿಳೆಗೆ ನಿಯತಿ ಫೌಂಡೇಶನ್ ಸದಸ್ಯೆ ಮಂಜರಿ 10 ಸಾವಿರ ರೂ. ನೀಡಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಹಾಯ ಮಾಡಲಾಗಿದೆ.
ರೋಗಿಗೆ ಆರ್ಥಿಕ ಸಹಾಯ ನೀಡಿದ್ದಕ್ಕಾಗಿ ನಿಯತಿಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರನೋಬತ್ ಅವರು ಮಂಜರಿ ಪಾಟೀಲ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.