ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಂಘದ ಹಿರಿಯ ಪ್ರಚಾರಕ ಪ್ರಕಾಶ ಕಾಮತ್(71) ವಯೋಸಹಜ ಕಾಯಿಲೆಯಿಂದ ಬೆಳಗಾವಿಯ ಕೆಎಲ್ ಇ ಆಸ್ಷತ್ರೆಯಲ್ಲಿ ಇಂದು ಸಾಯಂಕಾಲ ನಿಧನರಾದರು.
ಅವರ ಅಂತ್ಯಕ್ರಿಯೆ ನಾಳೆ ಶೃಂಗೇರಿಯಲ್ಲಿ ನೆರೆವೇರುವುದು. ಅವರು ಕಣ್ಣುಗಳನ್ನು ದಾನ ಮಾಡಿದ್ದಾರೆ.
ಮೂಲತಹ ಶೃಂಗೇರಿಯವರಾದ ಕಾಮತ್ 1977 ರಿಂದ ಸಂಘದ ಪ್ರಚಾರಕರಾಗಿ ಹೊನ್ನಾವರದಿಂದ ತಮ್ಮ ಸೇವಾ ಕಾರ್ಯವನ್ನು ಪ್ರಾರಂಭಿಸಿದ್ದರು. ಅವರ ಕುಟುಂಬ ಸಂಘದ ಹಿನ್ನೆಲೆಯಿಂದ ಬಂದಿದ್ದು, ಬಾಲ್ಯದಿಂದಲೆ ಸಂಘದ ಸ್ವಯಂ ಸೇವಕರಾಗಿ ಬೆಳೆದಿದ್ದರು.
ಸಂಘದ ಜಿಲ್ಲಾ ಹಾಗೂ ವಿಭಾಗದ ಪ್ರಚಾರಕರಾಗಿ, ನಂತರ ವನವಾಸಿ ಕಲ್ಯಾಣದ ಸೇವಾ ಕಾರ್ಯಗಳನ್ನು ಕರ್ನಾಟಕ ದಲ್ಲಿ ಬೇರೂರಲು ಶ್ರಮಿಸಿದರು.
ಬಿಹಾರದ ವನವಾಸಿ ಕಲ್ಯಾಣದ ಪ್ರಾಂತ ಸೇವಾ ಪ್ರಮುಖರಾಗಿ , ಅಖಿಲ ಭಾರತ ಪ್ರಶಿಕ್ಷಣ ವರ್ಗದ ರಾಷ್ಟ್ರೀಯ ಪ್ರಮುಖರಾಗಿ , ವನವಾಸಿ ಕಲ್ಯಾಣದ ಗ್ರಾಮ ಸೇವಾ ಪ್ರಕೋಷ್ಟದ ಪ್ರಮುಖರಾಗಿ ಸೇವೆ ಸಲ್ಲಿಸಿದ್ದರು.
ರಾಷ್ಟೀಯ ಸ್ವಯಂ ಸೇವಕ ಸಂಘ, ವನವಾಸಿ ಕಲ್ಯಾಣ, ಬಿಜೆಪಿ ಹಾಗೂ ಇತರೆ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶ್ರದ್ಧಾಂಜಲಿ ಅರ್ಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ