Latest

ಸಂಪನ್ಮೂಲಗಳ ಸದ್ಬಳಕೆ ಅನಿವಾರ್ಯ -ಆನಂದ ಬನಗಾರ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೋಡಿಯ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ವಿಶ್ವ ಜಲ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಿಕ್ಕೋಡಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ  ಆನಂದ ಬನಗಾರ ಮಾತನಾಡಿ, ನಮ್ಮ ದೇಶವು ಭೂಮಿಯ ಶೇ.2 ಭಾಗ ಭೂಮಿ ಹೊಂದಿದ್ದು ಜಗತ್ತಿನ ಶೇ.16 ಜನಸಂಖ್ಯೆ ಹೊಂದಿದೆ. ಇದಕ್ಕಾಗಿ ಸಂಪನ್ಮೂಲಗಳ ಸದ್ಬಳಕೆ ಅನಿವಾರ್ಯವಾಗಿದೆ. ನೀರಿಲ್ಲದೆ ಜೀವಿಸುವುದು ಕಷ್ಟಕರ. ಈ ಸಂಪನ್ಮೂಲವನ್ನು ಪೋಲು ಮಾಡದೆ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಉಪಯೋಗಿಸಬೇಕಾಗಿದೆ. ಕೈಗಾರಿಕೆಯಲ್ಲಿ ತಂತ್ರಜ್ಞಾನವನ್ನು ಲಾಭಕ್ಕಾಗಿ ಸೀಮಿತಗೊಳಿಸದೆ ನೀರಿನ ಅತ್ಯಲ್ಪ ಬಳಕೆಗೆ ಉಪಯೋಗಿಸಬೇಕಾಗಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಅಂತರ್ಜಲವನ್ನು ಭಾರತೀಯರು ಉಪಯೋಗಿಸುತ್ತಿದ್ದು , ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇದನ್ನು ತಡೆಗಟ್ಟಲು ಮಳೆನೀರು ಸಂಗ್ರಹ ಅಳವಡಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ,
ನೀರು ನಿಸರ್ಗದ ಅಮೂಲ್ಯ ಕೊಡುಗೆ, ಅದನ್ನು ಅನಾವಶ್ಯಕವಾಗಿ ಪೋಲು ಮಾಡದೆ ಮಿತವಾಗಿ ಬಳಸಿಕೋಳ್ಳಬೇಕು. ನದಿಗಳು ಬತ್ತಿ ಹೋಗಿವೆ. ಗಿಡ ಮರಗಳನ್ನು ನೆಟ್ಟು ನಿಸರ್ಗದ ಸಮತೋಲನ ಕಾಪಾಡಿದರೆ ಮಾತ್ರ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದರು.

ಇಂದು ನಾವು ಮಾಲಿನ್ಯಯುತ ಪರಿಸರದಲ್ಲಿ ಬದುಕುತ್ತಿದ್ದೇವೆ. ಜನಸಂಖ್ಯೆ ಹಾಗೂ ಆಧುನಿಕರಣದ ಬೆನ್ನಟ್ಟಿ ಗಿಡಮರಗಳನ್ನು ನಾಶಮಾಡುತ್ತಿದ್ದೇವೆ. ಕೈಗಾರಿಕಾ ತ್ಯಾಜ್ಯ ವಸ್ತುಗಳನ್ನು ನದಿಗಳಿಗೆ ಬಿಡುತಿದ್ದೇವೆ. ಇವುಗಳನ್ನು ನಿಲ್ಲಿಸಬೇಕಾಗಿದೆ. ನಾವೆಲ್ಲರು ಒಂದೇ ಕುಟುಂಬದವರೆಂದು ಭಾವಿಸಿ, ಮುಂದಿನ ಪೀಳಿಗೆಗೆ ಆರೋಗ್ಯಯುತ, ಸ್ವಚ್ಚ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರೊ. ಶ್ವೇತಾ ಬಿ. ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಪಿಪಿಟಿ ಮುಖಾಂತರ ವಿವರಿಸಿದರು.
ವಿಭಾಗ ಮುಖ್ಯಸ್ಥರಾದ ಪ್ರೊ. ವಿವೇಕ ಪಾಟೀಲ, ಡಾ. ಸಿದ್ದೇಶ ಎಮ್. ಬಿ., ಪ್ರೊ. ಸಚೀನ ಮೆಕ್ಕಳಕಿ, ವಿದ್ಯಾರ್ಥಿ ಸಂಯೋಜಕರಾದ ವಲ್ಲಭ ಕುಲಕರ್ಣೆ ಉಪಸ್ಥಿತರಿದ್ದರು.
ಪ್ರೊ. ಮಂಜುನಾಥ ಶರನಪ್ಪನವರ ಕಾರ್ಯಕ್ರಮವನ್ನು ಸಂಯೋಜಿಸಿದರು.  ಕೀರ್ತಿ ಕೋಳಿ ಸ್ವಾಗತಿಸಿದರು.  ಸಾನೀಯಾ ಖತೀಬ ಅತಿಥಿಯನ್ನು ಪರಿಚಯಿಸಿದರು.  ಯಾಸ್ಮಿನ ಮಸಳಿ ನಿರೂಪಿಸಿದರು.
ದೀಪಾ ಹುದ್ದಾರ ವಂದಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆಲ್ಲ ಹಿಂಚಿರಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button