Kannada NewsKarnataka NewsLatest

*ಮತ್ತೊಂದು ಎಟಿಎಂ ದರೋಡೆ: 3 ಕೋಟಿಯಷ್ಟು ಹಣ ಲಪಟಾಯಿಸಿದ ಕಂಪನಿ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ಜಮೆ ಮಾಡಲು ಬಂದಿದ್ದ ಸಿಬ್ಬಂದಿಯೇ 3 ಕೋಟಿ ಯಷ್ಟು ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಹಾಸನ ನಗರದಲ್ಲಿ ವಿವಿಧ ಬ್ಯಾಂಕ್ ಗಳ ಎಟಿಎಂಗೆ ಹಾಕಬೇಕಿದ್ದ ಹಣವನ್ನು ಸಿಎಂಎಸ್ ಕಂಪನಿಯ ಸಿಬ್ಬಂದಿಗಳೇ ಲಪಟಾಯಿಸಿ ಎಸ್ಕೇಪ್ ಆಗಿದ್ದಾರೆ. ಕಂಪನಿಯ ಸಿಬ್ಬಂದಿಯೇ ಎಟಿಎಂಗೆ ಹಣ ಹಾಕಿದ್ದಾಗಿ ಸುಳ್ಳು ಲೆಕ್ಕ ನೀಡಿದ್ದಾರೆ. ಕಂಪನಿಯ ಆಡಿಟ್ ವೇಳೆ ಅವ್ಯವಹಾರ ಬೆಳಕಿಗೆ ಬಂದಿದೆ.

ಕಂಪನಿಯ ನಂದೀಶ್ ಹಾಗೂ ಮಧು ಎಂಬುವವರು ಹಣ ದುರುಪಯೋಗ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹಾಸನದ ಗೌರಿಕೊಪ್ಪಲಿನಲ್ಲಿರುವ ಕ್ಯಾಅಶ್ ಮ್ಯಾಅನೇಜ್ಮೆಂಟ್ ಸರ್ವಿಸ್ (ಸಿಎಂಎಸ್) ಕಚೇರಿ ನಗರದ ಕೆನರಾ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಸೇರಿದಂತೆ ಒಟ್ಟು 15 ಬ್ಯಾಂಕ್ ಗಳ 28 ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊಂದಿತ್ತು. ಹಣ ತುಂಬಿಸಲು ಹೋದಾಗಲೇ ಸಿಬ್ಬಂದಿಗಳು ಮೂರು ಕ್ಟಿಯಷ್ಟು ಹಣ ಎಗರಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಆಗಮಿಸಿರುವ ಉನ್ನತ ಅಧಿಕಾರಿಗಳ ತಂಡ ಲೆಕ್ಕಾಚಾರ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button