
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಅನಗೋಳ ಲೋಹಾರಗಲ್ಲಿಯ ನಿವಾಸಿ ಮಂಜುಳಾ ರಾಮಲಿಂಗ ಸುಣಗಾರ (27) ಅವರು ತಮ್ಮ 14 ತಿಂಗಳ ಮಗ ಆರ್ಯನ ರಾಮಲಿಂಗ ಸುಣಗಾರನೊಂದಿಗೆ ಸೆ.18ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.
ಮಂಜುಳಾ ಅವರು ಮಗನನ್ನು ಕರೆದುಕೊಂಡು ಲಕ್ಷ್ಮೀಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುತ್ತೇನೆ ಎಂದು ಕುಟುಂಬದವರಿಗೆ ತಿಳಿಸಿ ಮನೆಯಿಂದ ತೆರಳಿದ್ದರು. ಆದರೆ ಬಳಿಕ ಮನೆಗೆ ಮರಳದೇ ಇರುವ ಹಿನ್ನೆಲೆಯಲ್ಲಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಮಂಜುಳಾ ಅವರು ಸುಮಾರು 4.2 ಅಡಿ ಎತ್ತರ, ದುಂಡು ಮುಖ, ಗುಂಡು ಮೂಗು, ಗೋದಿಗೆಂಪು ಮೈಬಣ್ಣ ಹಾಗೂ ಕಪ್ಪು ಕೂದಲು ಹೊಂದಿದ್ದು, ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಕೆಂಪು ಬಣ್ಣದ ಚೂಡಿ ಟಾಪ್, ಕಪ್ಪು ಪ್ಯಾಂಟ್ ಹಾಗೂ ಬಿಳಿ ದುಪ್ಪಟ್ಟಾ ಧರಿಸಿದ್ದರು.
ಮಗ ಆರ್ಯನ ಸುಮಾರು 2 ಅಡಿ ಎತ್ತರ, ದುಂಡು ಮುಖ, ಗುಂಡು ಮೂಗು, ಗೋದಿಗೆಂಪು ಮೈಬಣ್ಣ ಹಾಗೂ ಕಪ್ಪು ಕೂದಲು ಹೊಂದಿದ್ದು, ಕಪ್ಪು ಟೀ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದನು.
ಈ ಚಹರೆಯ ಮಹಿಳೆ ಮತ್ತು ಮಗುವಿನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಿಲಕವಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




