ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬಹಳ ದಿನಗಳಿಂದ ಸಚಿವಸಂಪುಟ ಸಭೆಗೂ ಹೋಗದೆ, ಮುಖ್ಯಮಂತ್ರಿಗಳು ಬೆಳಗಾವಿಗೆ ಬಂದಾಗ ಸ್ವಾಗತಿಸಲೂ ಹೋಗದೆ ಮುನಿಸಿಕೊಂಡಿರುವ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ..ಕುಮಾರಸ್ವಾಮಿ ವಿಧಾನಪರಿಷತ್ತಿನಲ್ಲಿ ಗುರುವಾರ ಮೈ ಕೈ ಮುಟ್ಟಿ ಚರ್ಚೆ ನಡೆಸಿದರು.
ಮುಖ್ಯಮಂತ್ರಿ ಕುಳಿತಲ್ಲಿಗೆ ಬಂದ ರಮೇಶ ಜಾರಕಿಹೊಳಿ ಬಗ್ಗಿ ನಿಂತುಕೊಂಡು ಸಿಎಂ ಜೆತೆ ಕೆಲ ಹೊತ್ತು ಮಾತುಕತೆ ನಡೆಸಿದರು. ಕುಮಾರಸ್ವಾಮಿ ಜೋರಾಗಿ ನಗುತ್ತಲೆ ರಮೇಶ್ ಕೈ ಹಿಡಿದುಕೊಂಡು, ತಲೆ ಸವರುತ್ತ, ಗಲ್ಲಮುಟ್ಟುತ್ತ ಮಾತನಾಡಿದರು. ಇಬ್ಬರ ನಡುವಿನ ಮಾತುಕತೆಯ ವಿವರ ಲಭ್ಯವಾಗದಿದ್ದರೂ ಮುನಿಸು ಶಮನವಾಯಿತೇ ಎನ್ನುವ ಪ್ರಶ್ನೆ ಮೂಡಿತು.
ಕೆಲ ತಿಂಗಳ ಹಿಂದೆಯೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕುಮಾರಸ್ವಾಮಿ ರಮೇಶ ಜಾರಕಿಹೊಳಿ ಗಲ್ಲ ಸವರಿ ಮಾತನಾಡಿಸಿದ್ದರು. ಆದರೆ ರಮೇಶ ಜರಕಿಹೊಳಿ ಭಿನ್ನಮತೀಯ ಚಟುವಟಿಕೆ ಮಾತ್ರ ನಿಂತಿರಲಿಲ್ಲ. ಇಂದಿನ ಮಾತುಕತೆಯ ಪರಿಣಾಮ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ