Latest

ಸತೀಶ್ ಗೆ ತಲೆ ಕೆಟ್ಟಿರಬೇಕು; ನಾನು ತಾಂತ್ರಿಕವಾಗಷ್ಟೆ ಕಾಂಗ್ರೆಸ್ ನಲ್ಲಿದ್ದೇನೆ -ರಮೇಶ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಾನು ತಾಂತ್ರಿಕವಾಗಷ್ಟೆ ಕಾಂಗ್ರೆಸ್ ನಲ್ಲಿದ್ದೇನೆ. ರಾಜಿನಾಮೆ ನೀಡುವುದು ಖಚಿತ. ಯಾವಾಗ ಅಂತ ಈಗ ಹೇಳಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ.

ಗೋಕಾಕನಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿರಬೇಕು. ಅವರು ಈಗಾಗಲೆ ಇಬ್ಬರು ಸಹೋದರರನ್ನು ಹಾಳು ಮಾಡಿದ್ದಾರೆ. ಹಾಗಾಗಿ ಅವರ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು.

ಬಿಜೆಪಿಯಲ್ಲಿ ಯಾವುದೇ ಸಮಸ್ಯೆಯಾದರೆ ತಕ್ಷಣ ಸ್ಪಂದಿಸಲಾಗುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಯಾರೂ ಹೇಳಕೇಳುವವರಿಲ್ಲ ಎಂದೂ ಅವರು ಹೇಳಿದರು. 

Home add -Advt

ಈ ಬಗ್ಗೆ ಪ್ರತಿಕ್ರಿಯಿಸಿದ ಲಖನ್ ಜಾರಕಿಹೊಳಿ, ಕಾಂಗ್ರೆಸ್ ಗೆಲ್ಲಿಸುವುದಷ್ಟೆ ನನ್ನ ಗುರಿ. ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ನಾನು ಯಾವುದೇ ಪಕ್ಷಕ್ಕೆ ಹೋಗಿ ಬಂದವನಲ್ಲ ಎಂದು ಹೇಳಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ರಮೇಶ ಬಿಜೆಪಿಗೆ ಹೋಗುವುದಾದರೆ ಹೋಗಲಿ. ನಂತರ ನಾನು ಮಾತನಾಡುತ್ತೇನೆ ಎಂದಿದ್ದಾರೆ.

 

 

 

Related Articles

Back to top button