Latest

ಸೋನಿಯಾ, ರಾಹುಲ್ ರಿಂದ ತೆರಿಗೆ ವಂಚನೆ?

   

 

    ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್  ನಾಯಕಿ ಸೋನಿಯಾ ಗಾಂಧಿ  2011-12ರಲ್ಲಿ ತಮ್ಮ ಘೋಷಿತ  ಆದಾಯಕ್ಕಿಂತಲೂ ಕ್ರಮವಾಗಿ 154.96  ಮತ್ತು 155.41  ಕೋಟಿ ರೂ. ಆದಾಯಕ್ಕೆ ತೆರಿಗೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಐಟಿಯ ಮರುಮೌಲ್ಯಮಾಪನ ಆದೇಶದ ಪ್ರಕಾರ ಅವರ ಕುಟುಂಬವು 300 ಕೋಟಿ ರೂ. ಆದಾಯಕ್ಕೆ ತೆರಿಗೆ ವಂಚನೆ ಮಾಡಿದೆ. ಅವರ ತೆರಿಗೆ ಬಾಕಿಯು ಸುಮಾರು 100 ಕೋಟಿ ರೂ. ಇದೆ. 2011-12ನೇ ಸಾಲಿನ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಆದಾಯ ತೆರಿಗೆಯ ಮರುಮೌಲ್ಯಮಾಪನ ನಡೆಸಿದ ಬಳಿಕ ಅವರ ವಿರುದ್ಧ ಡಿ.31ರಂದು ಆದೇಶ ಹೊರಡಿಸಲಾಗಿದ್ದು, ಅವರಿಗೆ ಆದೇಶದ ಪ್ರತಿಗಳನ್ನು ತಲುಪಿಸಲಾಗಿದೆ.

2011-12ನೇ ಸಾಲಿನಲ್ಲಿ ರಾಹುಲ್ ಗಾಂಧಿ ತಮಗೆ 68.12 ಲಕ್ಷ ಆದಾಯ ಇರುವುದಾಗಿ ಘೋಷಿಸಿ ಆದಾಯ ತೆರಿಗೆ ಮರುಪಾವತಿ ಮಾಡಿದ್ದರು. ಮರುಮೌಲ್ಯಮಾಪನ ಆದೇಶದ ಅನುಸಾರ ಪರಿಶೀಲನೆ ಮಾಡಿದಾಗ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ಆದಾಯ ಕೂಡ 48.93 ಕೋಟಿ ರೂ. ಇರುವುದು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸಂಬಂಧಿಸಿದಂತೆ ಆದಾಯದ ಲೆಕ್ಕಪತ್ರಗಳನ್ನು ಮರುಮೌಲ್ಯಮಾಪನ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆಯಾಗಿದೆ ಎಂದು ತಿಳಿಸಿದೆ. 
ತಮ್ಮ ತೆರಿಗೆ ಮರು ಮೌಲ್ಯಮಾಪನವನ್ನು ಆರಂಭಿಸುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋನಿಯಾ ಗಾಂಧಿ ಅವರ ಪರವಾಗಿ ಹಾಜರಾಗಿದ್ದ ಮಾಜಿ ಸಚಿವ ಪಿ. ಚಿದಂಬರಂ, ಸೋನಿಯಾ ಅವರ ಆದಾಯದ ಮರುಪರಿಶೀಲನೆ ನಡೆಸಿದ ಬಳಿಕ 44 ಕೋಟಿ ರೂ.ಅನ್ನು ತಪ್ಪಾಗಿ ತೆರಿಗೆ ಬಾಕಿಯನ್ನು ಹೊರಿಸಲಾಗಿದೆ ಎಂದು ವಾದಿಸಿದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button