Belagavi NewsBelgaum NewsCrimeKannada NewsKarnataka NewsLatestNationalPolitics

*ಪತ್ರಕರ್ತರ ಸೋಗಿನಲ್ಲಿ 50 ಲಕ್ಷಕ್ಕೆ ಡಿಮ್ಯಾಂಡ್: ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾಸಗಿ ಕ್ಷಣಗಳ ವಿಡಿಯೋ ಇಟ್ಟುಕೊಂಡು ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮೂವರು ಆರೋಪಿಗಳನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ದೂರುದಾರರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣ ಹಾಗೂ ನ್ಯೂಸ್ ಚಾನಲ್‌ಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಈ ವಿಡಿಯೋ ಪ್ರಸಾರ ಮಾಡದಿರಲು ರೂ.50 ಲಕ್ಷ ಹಣ ನೀಡುವಂತೆ ದೂರುದಾರರನ್ನು ಒತ್ತಾಯಿಸಿದ್ದರು.

Home add -Advt

ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕಲಂ-308(2),77,351 ಭಾರತೀಯ ನ್ಯಾಯ ಸಂಹಿತೆ-2023, ಕಲಂ 66(ಇ), 67, 67(ಎ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಯಡಿ ಪ್ರಕರಣ ದಾಖಲಾಗಿದೆ. 

ಸಮೀರ್ ನಿಸಾರ್ ಅಹಮ್ಮದ್ ಶೇಖ್ (32), ಅಬ್ದುಲ್‌ರಶೀದ್‌ ನಜೀರ್ ಅಹಮ್ಮದ್ ಮಕಾಂದಾರ್ (51), ಮೊಹಮ್ಮದ್ ದಿಲಾವರ್ ಬಾಳೆಕುಂದ್ರಿ (43) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ‌. 

ಸದ್ಯ ಆರೋಪಿಗಳನ್ನು ಬಂಧನ ಮಾಡಿ  ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ಜಪ್ತ ಮಾಡಿಕೊಳ್ಳಲಾಗಿದೆ.

ವಿವೋ 27 ಮೋಬೈಲ್,  64 ಜಿಬಿ ಪೆನ್‌ಡ್ರೈವ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಅಲ್ವಾ ಮೊಬೈಲ್, ಐಕ್ಯೂ ಜೆಡ್ ಎಕ್ಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 22 ಅಲ್ವಾ ಮೊಬೈಲ್, 6 ಹಿಡನ್ ಕ್ಯಾಮೆರಾ ಹೋಲ್ಡರ್‌ಗಳು. 2 ಓಟಿಜಿ 02 ಮೆಮೊರಿ ಕಾರ್ಡ್‌ ಗಳು ಮತ್ತು ರೀಡರ್‌ಗಳ, ಮೇಮೂರಿ ಕಾರ್ಡ್, ಟೋಯೋಟಾ ಇನ್ನೋವಾ ಕ್ರಿಸ್ಟಾ ಕಾರು ವಶಕ್ಕೆ ಪಡೆಯಲಾಗಿದೆ. 

Related Articles

Back to top button