*ರಾತ್ರಿ 2.30ಕ್ಕೆ ಗೆಳಯನಿಗೆ ತುರ್ತು ಮೆಸೇಜ್ ಕಳಿಸಿದ್ದ ನಾನಾ ಪಾಟೇಕರ್*: *ನಟನ ಕೊನೆ ಕ್ಷಣ ಹೇಗಿತ್ತು?*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ ನಿಧನ ಭಾರತೀಯ ಚಿತ್ರರಂಗಕ್ಕೆ ಆಘಾತ ಮೂಡಿಸಿದೆ. ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ನಟನ ಕೊನೆಯ ಕ್ಷಣಗಳ ಕುರಿತು ವೈದ್ಯರು ನೀಡಿರುವ ಮಾಹಿತಿ ಮತ್ತಷ್ಟು ದುಃಖವನ್ನುಂಟು ಮಾಡಿದೆ.
ರಾತ್ರಿ 2.30ರ ಸುಮಾರಿಗೆ ನಾನಾ ಪಾಟೇಕರ್ಗೆ ಎದೆ ನೋವು ಹಾಗೂ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ನಿದ್ದೆಯಿಂದ ಎದ್ದ ಬಳಿಕ ಸ್ನೇಹಿತರಿಗೆ ಸಂದೇಶ ಕಳುಹಿಸಿ ಎಡಭಾಗದ ಎದೆಯಲ್ಲಿ ನೋವು ಕಾಣಿಸಿಕೊಂಡಿರುವುದು ಹಾಗೂ ತೀವ್ರ ಅಸ್ವಸ್ಥತೆ ಕಾಡುತ್ತಿರುವುದಾಗಿ ತಿಳಿಸಿದ್ದರು.
ಆದರೆ ಆ ಸಮಯದಲ್ಲಿ ಸ್ನೇಹಿತರು ಸಂದೇಶವನ್ನು ಗಮನಿಸಿರಲಿಲ್ಲ. ಬಳಿಕ ಬೆಳಗ್ಗೆ 4 ಗಂಟೆ ಸುಮಾರಿಗೆ ಸಂದೇಶ ನೋಡಿದ ಸ್ನೇಹಿತರು ತಕ್ಷಣ ನಾನಾ ಪಾಟೇಕರ್ಗೆ ಕರೆ ಮಾಡಿದ್ದಾರೆ. ಈ ವೇಳೆ ಉಸಿರಾಟದ ತೊಂದರೆ ಹಾಗೂ ಎದೆ ನೋವಿನಿಂದ ನಟ ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಎಂದು ವೈದ್ಯ ಶೇಖರ್ ಸಾಲ್ಕಾರ್ ತಿಳಿಸಿದ್ದಾರೆ.
ಸ್ನೇಹಿತರು ತಕ್ಷಣ ಆಂಬುಲೆನ್ಸ್ಗೆ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. ನಾನಾ ಪಾಟೇಕರ್ ಯಾವುದೇ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ತಕ್ಷಣ ಸಿಪಿಆರ್ ಆರಂಭಿಸಲಾಗಿದೆ. ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲೂ ಸಿಪಿಆರ್ ಮುಂದುವರಿಸಲಾಗಿತ್ತು. ಒಟ್ಟು ಸುಮಾರು 45 ನಿಮಿಷಗಳ ಕಾಲ ವೈದ್ಯಕೀಯ ತಂಡ ನಾನಾ ಪಾಟೇಕರ್ರನ್ನು ಬದುಕಿಸಲು ಪ್ರಯತ್ನಿಸಿತ್ತು ಎಂದು ಡಾ. ಶೇಖರ್ ಸಾಲ್ಕಾರ್ ತಿಳಿಸಿದ್ದಾರೆ.
ಆದರೆ ಸತತ ಪ್ರಯತ್ನದ ಬಳಿಕವೂ ನಾನಾ ಪಾಟೇಕರ್ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಳಗ್ಗೆ 5.20ರ ವೇಳೆಗೆ ವೈದ್ಯರು ನಿಧನವನ್ನು ದೃಢಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ನಿಧನದ ಮಾಹಿತಿ ತಿಳಿಯುತ್ತಿದ್ದಂತೆ ಗೋವಾ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿತ್ತು. ನಾನಾ ಪಾಟೇಕರ್ ಗೋವಾದ ಮನೆಯಲ್ಲಿ ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದರು. ಕುಟುಂಬಸ್ಥರು ಆ ಸಮಯದಲ್ಲಿ ಜೊತೆಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ತುರ್ತು ನೆರವು ದೊರೆಯಲು ಸಮಯ ತೆಗೆದುಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




