Kannada NewsKarnataka NewsLatest

*ಡಿ.ಕೆ. ಶಿವಕುಮಾರ್‌ಗಾಗಿ ಇಂಡಿಗೋ ವಿಮಾನ ವಿಳಂಬ? ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಅವರಿಗಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ 6E870 ವಿಮಾನವನ್ನು ತಡ ಮಾಡಲಾಯಿತೇ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆನಡೆದಿದೆ.

ಆದರೆ, ಈ ವಿಚಾರವನ್ನು ತಳ್ಳಿ ಹಾಕಿರಿವ ಇಂಡಿಗೋ ವಿಮಾನ ಯಾನ ಸಂಸ್ಥೆ, ವಿಮಾನ ವಿಳಂಬಕ್ಕೆ ಕಾರ್ಯಾಚರಣೆಗೆ ಸಂಬಂಧಿಸಿದ ಅಂಶಗಳೇ ಕಾರಣ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ 6E870 ನಿಗದಿತ ಸಮಯಕ್ಕಿಂತ ತಡವಾಗಿ ಹೊರಟಿದೆ. ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ರಾತ್ರಿ 7.30ಕ್ಕೆ ಹೊರಡಬೇಕಿದ್ದ ವಿಮಾನ ಸುಮಾರು 8.06ಕ್ಕೆ ಟೇಕ್‌ಆಫ್ ಆಗಿದ್ದು, ಸುಮಾರು 36 ನಿಮಿಷ ವಿಳಂಬವಾಗಿದೆ.

ಈ ನಡುವೆ, ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಡಿ.ಕೆ. ಶಿವಕುಮಾರ್ ಅವರ ಆಗಮನಕ್ಕಾಗಿ ವಿಮಾನ ರನ್‌ವೇಯಲ್ಲಿ ಕಾಯಬೇಕಾಯಿತು ಎಂದು ಆರೋಪಿಸಿದ್ದಾರೆ. ಇದರಿಂದ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ವಿಮಾನ ವಿಳಂಬಕ್ಕೆ ಡಿ.ಕೆ. ಶಿವಕುಮಾರ್ ಅವರ ಆಗಮನವೇ ಕಾರಣ ಎಂಬ ಆರೋಪವನ್ನು ಇಂಡಿಗೋ ದೃಢಪಡಿಸಿಲ್ಲ. ಬದಲಾಗಿ, ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದ ಕಾರಣಗಳಿಂದ ವಿಳಂಬ ಉಂಟಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.

ಹೀಗಾಗಿ, ವಿಮಾನ ವಿಳಂಬವಾಗಿರುವುದು ದೃಢವಾಗಿದ್ದರೂ, ಅದು ಡಿ.ಕೆ. ಶಿವಕುಮಾರ್ ಅವರ ಆಗಮನದಿಂದಲೇ ಸಂಭವಿಸಿದೆ ಎಂಬ ಆರೋಪಕ್ಕೆ ಸದ್ಯಕ್ಕೆ ಏರ್‌ಲೈನ್ಸ್‌ನಿಂದ ಯಾವುದೇ ದೃಢೀಕರಣವಿಲ್ಲ. ಈ ಹಿನ್ನೆಲೆಯಲ್ಲಿ ಘಟನೆ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button