Latest

ಸೋಮವಾರ ಬೆಳಗಾವಿ ನಗರ ಸಂಚಾರದಲ್ಲಿ ಭಾರೀ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವ ಹಿನ್ನೆಲೆಯಲ್ಲಿ  ಸುರಕ್ಷಿತ ಸುಗಮ ಸಂಚಾರದ ಹಿತದೃಷ್ಟಿಯಿಂದ ಸೋಮವಾರ ಬೆಳಗಾವಿ ನಗರದಲ್ಲಿ ಮಾರ್ಗಗಳ ಬದಲಾವಣೆ ಮಾಡಲಾಗಿದು.

ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಮಾರ್ಗಗಳನ್ನು ಬದಲಿಸಲಾದೆ. 

 ಸಾಂಬ್ರಾ ಅಂಡರ್ ಬ್ರಿಜ್, ಮಹಾಂತೇಶ ನಗರ ಅಂಡರ್ ಬ್ರಿಜ್, ಅಶೋಕ ಪಿಲ್ಲರ ವೃತ್ತದ ಮೂಲಕ ಹಾಯ್ದು ಬರುವ ಎಲ್ಲ ತರಕಾರಿ ವಾಹನಗಳು ಅಲಾರವಾಡ ಅಂಡರ ಬ್ರಿಜ್, ಯಡಿಯೂರಪ್ಪ ಮಾರ್ಗದ ಮುಖಾಂತರ ಹಳೆ ಪಿಬಿ ರಸ್ತೆಯನ್ನು ಬಳಸಿಕೊಂಡು ಸಂಚರಿಸುವುದು.
ಗೋವಾ ಕಡೆಯಿಂದ ಬರುವ ಎಲ್ಲ ಸಾರಿಗೆ ಸಂಸ್ಥೆಯ ಬಸ್ಸುಗಳು ಪೀರನವಾಡಿ ನಾಕಾ ಹತ್ತಿರ ನಿಲುಗಡೆ ಮಾಡುವುದು ಮತ್ತು ಅಲ್ಲಿಂದಲೇ ಮರಳಿ ಹೋಗುವುದು.
ಕೊಲ್ಹಾಪೂರ, ಗೋಕಾಕ, ಧಾರವಾಡ ಕಡೆಗಳಿಂದ ಬರುವ ಬಸ್ಸುಗಳು ಅಶೋಕ ನಗರದ ೪ ಲೇನ್ ರಸ್ತೆಯ ಮೇಲೆ ಖಾಲಿ ಸ್ಥಳಕ್ಕೆ ಹೋಗುವುದು ಮತ್ತು ಅಲ್ಲಿಂದಲೇ ಕಾರ್ಯಾಚರಣೆ ಮಾಡುವುದು. ಅದೇ ರೀತಿ ನಗರ ಸಾರಿಗೆ (ಸಿಬಿಟಿ) ಬಸ್ಸುಗಳು ಅಶೋಕ ನಗರದ ಧರ್ಮನಾಥ ಸರ್ಕಲ್ ದಿಂದ ಕಾರ್ಯಾಚರಣೆ ಮಾಡುವುದು.
ರವಿವಾರ  ಮುಂಜಾನೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ಸೋಮವಾರ  ಮುಂಜಾನೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸಲು ನಿಷೇಧಿಸಲಾಗಿದೆ.
 ಗೋವಾ, ಖಾನಾಪುರ ಕಡೆಯಿಂದ ಬರುವವರು ದೇಸೂರ ಮುಖಾಂತರ ಕೆ.ಕೆ.ಕೊಪ್ಪ ಹಾಗೂ ಹಲಗಾ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರುವುದು, ಗೋಕಾಕ ಕಡೆಯಿಂದ ಬರುವವರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸೇರಿ ನಗರ ಪ್ರವೇಶಿಸದೇ ಕೆ.ಕೆ.ಕೊಪ್ಪ ಕ್ರಾಸ್ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆಗೆ ಸೇರಬಹುದಾಗಿದೆ. ಅದೇ ರೀತಿ ಕೋಲ್ಹಾಪುರ ಕಡೆಯಿಂದ ಬರುವವರು ನಗರ ಪ್ರವೇಶಿಸದೇ ರಾಷ್ಟ್ರೀಯ ಹೆದ್ದಾರಿ ಮೂಲಕ ಕೆ.ಕೆ.ಕೊಪ್ಪ ಕ್ರಾಸ್ ಮೂಲಕ ದೇಸೂರ ಮಾರ್ಗವಾಗಿ ಗೋವಾ ರಸ್ತೆಗೆ ಸೇರಿ ಮುಂದೆ ಸಾಗುವುದು.
ಸೋಮವಾರ ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟಿಳಕವಾಡಿಯ 1ನೇ ರೇಲ್ವೆ ಗೇಟ್, 2ನೇ ರೇಲ್ವೆ ಗೇಟ್ ಸಂಪೂರ್ಣ ಬಂದ್ ಇರಲಿದ್ದು ಈ ಮೂಲಕ ಸಂಚರಿಸುವವರು ಪರ್ಯಾಯ ಮಾರ್ಗವಾಗಿ ಕಪಿಲೇಶ್ವರ ಓವರ್ ಬ್ರಿಜ್ ಮತ್ತು ಹಳೆ ಪಿಬಿ ರಸ್ತೆ ಓವರ್ ಬ್ರಿಜ್‌ಗಳನ್ನು ಬಳಸಿ ಸಂಚರಿಸುವುದು.
 ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ಮೇಲೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ಜಾಗದಲ್ಲಿ ವಾಹನ ನಿಲ್ಲಿಸುತ್ತಿದ್ದವರು ಬಾಕ್ಸಾಯಿಟ ರಸ್ತೆ ಹಾಗೂ ಅಲಾರವಾಡ ರಸ್ತೆ ಕಡೆಗೆ ಹೋಗುವುದು.
ಉಪರಾಷ್ಟ್ರಪತಿಗಳು ಬೆಳಗಾವಿ ನಗರದಲ್ಲಿ ಸಂಚರಿಸುವ ಸಾಂಬ್ರಾ ರಸ್ತೆ, ರಾಷ್ಟ್ರೀಯ ಹೆದ್ದಾರಿ-4, ಲೇಕವ್ಯೂವ್ ಆಸ್ಪತ್ರೆ ರಸ್ತೆ, ಅಶೋಕ ಪಿಲ್ಲರ ದಿಂದ ಚನ್ನಮ್ಮಾ ವೃತ್ತ, ಚನ್ನಮ್ಮಾ ವೃತದಿಂದ ಗೋಗಟೆ ಸರ್ಕಲ್ ಕಾಂಗ್ರೇಸ್ ರಸ್ತೆ, ಖಾನಾಪುರ ರಸ್ತೆ ಹಾಗೂ ಪೀರನವಾಡಿ ಕ್ರಾಸ್ ದಿಂದ ವಿಟಿಯುವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.
ವಿಜಯಪುರ, ಬಾಗಲಕೋಟೆ, ನೇಸರಗಿ, ಯರಗಟ್ಟಿ, ಲೋಕಾಪುರ ಕಡೆಯಿಂದ ಬರುವ ವಾಹನಗಳು ಮಾರಿಹಾಳ ಪೊಲೀಸ್ ಠಾಣೆ ಪಕ್ಕದ ರಸ್ತೆಯಿಂದ ಸುಳೆಭಾವಿ ಮಾರ್ಗದ ಮೂಲಕ ಗೋಕಾಕ ರಸ್ತೆ ಸೇರುವುದು.
ಸೋಮವಾರ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ಬೆಳಿಗ್ಗೆ8.30ರೊಳಗೆ ತಮ್ಮ ಪರೀಕ್ಷಾ ಕೇದ್ರದಲ್ಲಿ ಹಾಜರಿರುವಂತೆ  ಪಾಲಕರು ನೋಡಿಕೊಂಡು ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.

Home add -Advt

 

(ಈ ಸುದ್ದಿಯನ್ನು ಎಲ್ಲರಿಗೂ, ಎಲ್ಲಾ ಗ್ರುಪ್ ಗಳಿಗೂ ಶೇರ್ ಮಾಡಿ)

Related Articles

Back to top button